ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತ ಕಲಿಕೆಗೆ ‘ಬಿಲ್ಡಿಂಗ್ ಬ್ಲಾಕ್’ ಆ್ಯಪ್‌ ಬಿಡುಗಡೆ

Published 4 ಏಪ್ರಿಲ್ 2024, 0:27 IST
Last Updated 4 ಏಪ್ರಿಲ್ 2024, 0:27 IST
ಅಕ್ಷರ ಗಾತ್ರ

ಅಳ್ನಾವರ: ಗಣಿತದ ವಿವಿಧ ವಿಷಯವನ್ನು ತರಗತಿ ಚೌಕಟ್ಟನ್ನು ಮೀರಿ ಮಕ್ಕಳು ಕಲಿಯಲು ಅನುಕೂಲ ಆಗುವಂತೆ ಬೆಂಗಳೂರಿನ ಅಕ್ಷರ ಪೌಂಡೇಶನ್‌ ವಿನೂತನ ‘ಬಿಲ್ಡಿಂಗ್ ಬ್ಲಾಕ್’ ಹೆಸರಿನ ಆ್ಯಪ್‌ ಬಿಡುಗಡೆ ಮಾಡಿದೆ. ಇದು ಸಂಪೂರ್ಣ ಉಚಿತ ಇದೆ. ಮಕ್ಕಳು ಆಟವಾಡುತ್ತಾ ಇದನ್ನು ಕಲಿಯಬಹುದು ಎಂದು ಪೌಂಡೇಶನ್‌ನ ಸಂಪನ್ಮೂಲ ವ್ಯಕ್ತಿ ಎನ್. ಯೋಗಿತಾ ಹೇಳಿದರು.

ಸಮೀಪದ ಬೆಣಚಿ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಕ್ಕಳ ಗಣಿತ ಕಲಿಕೆಯಲ್ಲಿ ಪ್ರಯೋಗಶೀಲ ಕ್ರಾಂತಿ ಮೂಡಿಸಲು ಹಾಗೂ ಗಣಿತದ ಮೂಲ ಪಾಠ ಕಲಿಯಲು ಇದು ಸಹಕಾರಿಯಾಗಿದೆ ಎಂದರು.

ಮಕ್ಕಳಿಗಾಗಿಯೇ ತಂದಿರುವ ಈ ಪ್ರಯೋಗಾತ್ಮಕ ಆ್ಯಪ್‌ ಎಲ್ಲಾ ಆಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಲಭ್ಯವಿರಲಿದೆ. ಇದು ತರಗತಿಯಲ್ಲಿ ಕಲಿಸುವ ಪರಿಕಲ್ಪನೆಗಳನ್ನು ಬಲಪಡಿಸುತ್ತದೆ. ಸಾಂಪ್ರದಾಯಿಕ ಕಲಿಕೆಗೆ ವಿಭಿನ್ನವಾಗಿ ಈ ಆ್ಯಪ್‌ ಸಿದ್ಧಪಡಿಸಲಾಗಿದೆ ಎಂದರು.

ಶಾಲಾ ಪಠ್ಯಕ್ರಮದ ಜೊತೆ ಗಣಿತದ ಪ್ರಮುಖ ಪರಿಕಲ್ಪನೆಗಳನ್ನು ಮಕ್ಕಳ ಅಭಿರುಚಿಗೆ ತಕ್ಕಂತೆ, ಕಲಿಕೆಯನ್ನು ಆಸಕ್ತಿದಾಯಕವಾಗಿ ಹಾಗೂ ಮೋಜಿನಿಂದ ಕೂಡಿರುವಂತೆ ಈ ಅಪ್ಲಿಕೇಷನ್‌ ಸಿದ್ಧಪಡಿಸಲಾಗಿದೆ ಎಂದರು.

ಈ ಅಪ್ಲಿಕೇಶನ್ ಸಂಪೂರ್ಣ ಉಚಿತ. ಇದಕ್ಕೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಮಕ್ಕಳಿಗೂ ಯಾವುದೇ ಆರ್ಥಿಕ ಅಡೆತಡೆಗಳು ಎದುರಾಗದೇ ಗಣಿತದಲ್ಲಿ ಪರಿಣಿತರಾಗಬೇಕು
ಎಂಬ ಉದ್ದೇಶ ನಮ್ಮದು ಎಂದರು.

ಕ್ಯೂಆರ್ ಕೋಡ್

ಕ್ಯೂಆರ್ ಕೋಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT