ಗುರುವಾರ , ಜುಲೈ 29, 2021
23 °C

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ: ಅಂತಿಮ ಪಟ್ಟಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಗೆ ಮತದಾರರ ಅಂತಿಮ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಒಟ್ಟು 8,11,632 ಮತ ಚಲಾಯಿಸುವ ಹಕ್ಕು ಪಡೆದುಕೊಂಡಿದ್ದಾರೆ.

ಅವಳಿ ನಗರಗಳಲ್ಲಿ ಒಟ್ಟು 82 ವಾರ್ಡ್‌ಗಳಿದ್ದು, 4,03,657 ಪುರುಷರು, 4,07,891 ಮಹಿಳೆಯರು ಮತ್ತು 84 ಇತರ ಮತದಾರರು ಇದ್ದಾರೆ. 33ನೇ ವಾರ್ಡ್‌ನಲ್ಲಿ ಅತಿ ಹೆಚ್ಚು ಅಂದರೆ 13,648 ಮತದಾರರು ಇದ್ದಾರೆ. ಇದರಲ್ಲಿ 6,809 ಪುರುಷರು ಹಾಗೂ 6,839 ಮಹಿಳಾ ಮತದಾರರು ಸೇರಿದ್ದಾರೆ. 79ನೇ ವಾರ್ಡ್‌ನಲ್ಲಿ ಕಡಿಮೆ 5,924 ಜನ ಮತದಾರರು ಪಟ್ಟಿಯಲ್ಲಿದ್ದಾರೆ. 2,976 ಪುರುಷ ಹಾಗೂ 2,978 ಮಹಿಳಾ ಮತದಾರರಿದ್ದಾರೆ. ಈ ಎರಡೂ ವಾರ್ಡ್‌ಗಳಲ್ಲಿ ಇತರ ಮತದಾರರು ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು