ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದುರ್ಬಲರಿಗೆ ಮೈತ್ರಿ ಅನಿವಾರ್ಯ: ಜಗದೀಶ ಶೆಟ್ಟರ್‌

Published 8 ಸೆಪ್ಟೆಂಬರ್ 2023, 20:29 IST
Last Updated 8 ಸೆಪ್ಟೆಂಬರ್ 2023, 20:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅಸಹಾಯಕರು ಒಂದಾಗುವುದು ಸಾಮಾನ್ಯ. ಅದೇ ರೀತಿ, ಬಿಜೆಪಿ– ಜೆಡಿಎಸ್‌ ಎರಡೂ ಪಕ್ಷಗಳು ದುರ್ಬಲವಾಗಿದ್ದು, ಮೈತ್ರಿ ಅನಿವಾರ್ಯವಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಜಗದೀಶ ಶೆಟ್ಟರ್‌ ತಿಳಿಸಿದರು.

‘ಮೈತ್ರಿ  ವಿಚಾರ ಅವರಿಗೆ ಬಿಟ್ಟದ್ದು. ಎರಡೂ ಪಕ್ಷಗಳ ನಡುವೆ ಪೈಪೋಟಿ ಇತ್ತು. ಈಗ ಸ್ವಯಂ ಅನುಕೂಲಕ್ಕೆ ಮೈತ್ರಿ ಮಾಡಿಕೊಳ್ಳುತ್ತಿವೆ. ಆ ಪಕ್ಷಗಳ ಮೇಲೆ ಜನರಿಗೆ ವಿಶ್ವಾಸ ಮತ್ತು ನಂಬಿಕೆ ಹೋಗಿದೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಬಲಗೊಂಡಿದೆ. ಅದಕ್ಕಾಗಿ ಹಲವು ನಾಯಕರು ಬರಲು ಸಿದ್ಧರಾಗಿದ್ದಾರೆ. ಯಾರೆಲ್ಲ ಸೇರ್ಪಡೆ ಆಗುವರು ಎಂಬುದನ್ನು ಈಗಲೇ ಹೇಳಲು ಆಗುವುದಿಲ್ಲ. ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಇತರ ರಾಜ್ಯಗಳಲ್ಲೂ ಕಾಂಗ್ರೆಸ್‌ ಬಲಗೊಳ್ಳುತ್ತಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT