ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಯ ಸತ್ವ ಉಳಿಸುವ ಪದ್ಧತಿಯಲ್ಲಿ ಯಶಸ್ಸು ಕಂಡ ರೈತ ಮಲ್ಲಿಕಾರ್ಜುನ

ಬೆಳೆಹಾನಿ ತಡೆಗೆ ಸಾವಯವ ಕೃಷಿ
Last Updated 4 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಎಲ್ಲ ಕ್ಷೇತ್ರದಲ್ಲೂ ಲಾಭ– ನಷ್ಟ ಇದ್ದೇ ಇರುತ್ತದೆ. ಕೃಷಿಯಲ್ಲಿ ಮಾತ್ರ ನಷ್ಟವೆಂದು ಹಿಂದೆ ಸರಿಯುವುದರಿಂದ ಆಹಾರ ಉತ್ಪಾದನೆಗೆ ಸಮಸ್ಯೆಯಾಗುತ್ತದೆ. ವೈಜ್ಞಾನಿಕ ರೀತಿಯಲ್ಲಿ ಸಾವಯವ ಕೃಷಿ ಪದ್ಧತಿ ಅನುಸರಿಸಿದರೆ ಲಾಭ ಖಚಿತ...’

ತಾಲ್ಲೂಕಿನ ಸುಳ್ಳ ಗ್ರಾಮದ ರೈತ ಮಲ್ಲಿಕಾರ್ಜುನ ಮತ್ತಿಹಳ್ಳಿ ಅವರ ಭರವಸೆಯ ನುಡಿಗಳಿವು. ಬಿ.ಕಾಂ ಶಿಕ್ಷಣ ಪಡೆದು, ಟ್ರೇಡಿಂಗ್ ಹಾಗೂ ರಿಯಲ್ ಎಸ್ಟೇಟ್‌ನಲ್ಲಿ ತೊಡಗಿದ್ದ ಅವರು 8 ವರ್ಷಗಳಿಂದ ಕೃಷಿ ಕಾಯಕ ಮಾಡುತ್ತಿದ್ದಾರೆ. ‘ಸಾವಯವ ಪದ್ಧತಿಯಿಂದ ಆರಂಭದಲ್ಲಿ ಅಷ್ಟು ಲಾಭವಾಗದಿದ್ದರೂ, ಆನಂತರ ಲಾಭ ಸಿಗುತ್ತದೆ. ಭೂಮಿಯ ಫಲವತ್ತತೆಯೂ ಉಳಿಯುತ್ತದೆ’ ಎಂಬುದು ಅವರ ಸಲಹೆ.

‘ನನ್ನ 35 ಎಕರೆ ಜಮೀನನಲ್ಲಿ ಉದ್ದು, ಹೆಸರು, ಸೋಯಾಬಿನ್‌, ಕಡಲೆ ಬೆಳೆಯುತ್ತೇನೆ.ಜೀವಾಮೃತ, ಅಮೈನೊ ಆಸಿಡ್‌, ಝಿಬ್ರಾಲಿಕ್‌, ಅಗ್ನಿಹೋತ್ರಾ ಬೂದಿ, ದಶಪರ್ಣಿ (ಕೀಟನಾಶಕ), ಪಂಚಗವ್ಯಮಾತ್ರಬೆಳೆಗಳಪೋಷಣೆಗೆಬಳಸುತ್ತೇನೆ. ಮನೆಯಲ್ಲೇ ಇವುಗಳನ್ನು ತಯಾರಿ ಮಾಡಿಕೊಳ್ಳಲಾಗುತ್ತದೆ. ಇದರಿಂದ ಭೂಮಿ ಸತ್ವ ಕಳೆದುಕೊಳ್ಳುವುದಿಲ್ಲ. ಅತಿವೃಷ್ಟಿ–ಅನಾವೃಷ್ಟಿ ಏನೇ ಆದರೂ ಬೆಳೆಗಳಿಗೆ ಹಾನಿಯಾಗುವುದು ಕಡಿಮೆ’ ಎಂದು ಹೇಳಿದರು.

‘ಸಾವಯವ ಪದ್ಧತಿಯಿಂದ ಭೂಮಿ ಮೃದುವಾಗುತ್ತದೆ. ಹೆಚ್ಚು ಮಳೆಯಾದರೂ ನೀರು ಶೀಘ್ರ ಇಂಗುತ್ತದೆ. ಆರಂಭದಿಂದ ಕಟಾವಿನವರೆಗೆ ಎಕರೆಗೆ ₹2 ಸಾವಿರ ಅಷ್ಟೇ ಖರ್ಚಾಗುತ್ತದೆ. ಪಕ್ಕದ ಹೊಲಗಳ ರೈತರು ರಾಸಾಯನಿಕ ಪದ್ಧತಿ ಅನುಸರಿಸುವುದರಿಂದ ಎಕರೆಗೆ ಕನಿಷ್ಠ ₹4 ಸಾವಿರದ ವರೆಗೆ ಖರ್ಚು ಮಾಡುತ್ತಿದ್ದಾರೆ. ರಾಸಾಯನಿಕ ಬಳಕೆಯಿಂದ ಭೂಮಿ ಗಟ್ಟಿಯಾಗಿ, ಮಳೆ ನೀರು ಇಂಗುವುದಿಲ್ಲ. ಪರಿಣಾಮ ಮಳೆ ನೀರು ದೀರ್ಘ ಕಾಲದವರೆಗೆ ನಿಂತು ಬೆಳೆಹಾನಿಯಾಗುತ್ತದೆ. ಸಾವಯವ ಪದ್ಧತಿ ಅನುಸರಿಸುವುದೇ ಬೆಳೆನಷ್ಟ ತಡೆಗೆ ಪರಿಹಾರ’ ಎನ್ನುತ್ತಾರೆ ಮಲ್ಲಿಕಾರ್ಜುನ.

ಹೈನುಗಾರಿಕೆಯಲ್ಲೂ ತೊಡಗಿರುವ ಅವರು, ಸಮಗ್ರ ಕೃಷಿ ಅಳವಡಿಸಿಕೊಂಡು ಇತರ ರೈತರಿಗೆ ಮಾದರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT