ಫ್ಯಾಷನ್ ಷೋ ಅಂತಿಮ ಸ್ಪರ್ಧೆ 8ಕ್ಕೆ
ಹುಬ್ಬಳ್ಳಿ: ‘ಶ್ರೀಕಿ ಫ್ಯಾಷನ್ ಕ್ರಿಯೇಷನ್ಸ್ ಆಯೋಜಿಸಿರುವ ಮಿಸೆಸ್ ಯುನಿಟಿ ಕ್ವೀನ್ ಆಫ್ ಇಂಡಿಯಾ –2022 ಸೀಸನ್ನ ಅಂತಿಮ ಸ್ಪರ್ಧೆಯು ಧಾರವಾಡದ ಡಾ. ವೀರೇಂದ್ರ ಹೆಗ್ಗಡೆ ಕಲಾ ಕ್ಷೇತ್ರದಲ್ಲಿ ಮೇ 8ರಂದು ಸಂಜೆ 4ಕ್ಕೆ ನಡೆಯಲಿದೆ’ ಎಂದು ಕ್ರಿಯೇಷನ್ಸ್ನ ನಿರ್ದೇಶಕ ಓಂ ಕಿರಣ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ತರ್ ಮೋಹನಕಾ ಮಾತನಾಡಿ, ‘20– 40 ಮತ್ತು 40–60 ವರ್ಷದ ಮಹಿಳೆಯರಿಗೆ ನಡೆಯುತ್ತಿರುವ ಷೋನಲ್ಲಿ ಅಂತಿಮ ಸುತ್ತಿಗೆ ಎರಡೂ ವಿಭಾಗಗಳಿಂದ ತಲಾ 10 ಮಂದಿ ಆಯ್ಕೆಯಾಗಿದ್ದಾರೆ. ಅಂತಿಮ ಸುತ್ತಿನಲ್ಲಿ ಎರಡೂ ವಿಭಾಗಗಳಿಂದ ಒಬ್ಬೊಬ್ಬರನ್ನು ಆಯ್ಕೆ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ನಟ ಉಪೇಂದ್ರ, ಅವರ ಪತ್ನಿ ಪ್ರಿಯಾಂಕಾ ಭಾಗವಹಿಸಲಿದ್ದಾರೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.