ಹುಬ್ಬಳ್ಳಿಯ ಭಾವದೀಪ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿಮಲಾ ಕುಲಕರ್ಣಿ ಮೆಮೊರಿಯಲ್ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ರಾಮನಗೌಡ ಸಂಕನಗೌಡರ ಧ್ವಜಾರೋಹಣ ನೆರವೇರಿಸಿದರು. ಶಾಲೆಯ ಆಡಳಿತ ಮಂಡಳಿಯ ಸದಸ್ಯ ಶ್ರೀರಂಗ ಹನುಮಸಾಗರ ಪ್ರಾಚಾರ್ಯ ಎಂ.ಕೆ. ಹಿರೇಮಠ ಮತ್ತು ಮುಖ್ಯೋಪಾಧ್ಯಾಯ ಅನಿತಾ ಬಾಗಲಕೋಟ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿದ್ದರು
ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯ (ಐಸಿಎಐ) ಹುಬ್ಬಳ್ಳಿ ಶಾಖೆಯಲ್ಲಿ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯದರ್ಶಿ ಮಂಜುನಾಥ ಮೇಟಿ ಅಧ್ಯಕ್ಷ ಅಕ್ಷಯಕುಮಾರ್ ಸಿಂಘಿ ಪಾಲ್ಗೊಂಡರು