ಸೋಮವಾರ, ಸೆಪ್ಟೆಂಬರ್ 26, 2022
24 °C
ಶೇ 60ರಷ್ಟು ಸಿಬ್ಬಂದಿ ಅಸಮಾಧಾನ

ಹುಬ್ಬಳ್ಳಿ: ಬೀಟ್‌ ವ್ಯಾಪ್ತಿಯಲ್ಲಿ ಧ್ವಜಾರೋಹಣ, ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ‘ಮನೆ ಮನೆಯಲ್ಲಿ ತ್ರಿವರ್ಣ ಧ್ವಜ’ ಅಭಿಯಾನಕ್ಕೆ ಪೂರಕವಾಗಿ ನಗರದ ಗೋಕುಲ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ‘ಪ್ರತಿ ಬೀಟ್‌ನಲ್ಲಿಯೂ ಧ್ವಜಾರೋಹಣ’ ಯೋಜನೆ ಹಮ್ಮಿಕೊಳ್ಳಲಾಗಿದೆ.

ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ಯೋಜನೆಯ ರೂವಾರಿಯಾಗಿದ್ದು, ತಮ್ಮ ವ್ಯಾಪ್ತಿಯಲ್ಲಿನ 63 ಬೀಟ್‌ಗಳಲ್ಲಿಯೂ ತ್ರಿವರ್ಣ ಧ್ವಜ ಹಾರಿಸಲು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಕೆಲವು ಸಿಬ್ಬಂದಿ ತಮ್ಮ ಬೀಟ್‌ ವ್ಯಾಪ್ತಿಯಲ್ಲಿ ಧ್ವಜಾರೋಹಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಪೊಲೀಸ್‌ ಕಮಿಷನರೇಟ್‌ ಘಟಕದ ವ್ಯಾಪ್ತಿಯಲ್ಲಿಯೇ ಮಾದರಿ ಸ್ವಾತಂತ್ರ್ಯೋತ್ಸವಕ್ಕೆ ಅಣಿಯಾಗುತ್ತಿದ್ದಾರೆ. ಆದರೆ, ಶೇ 60ರಷ್ಟು ಸಿಬ್ಬಂದಿ ಇನ್‌ಸ್ಪೆಕ್ಟರ್‌ ನಿರ್ಧಾರದ ವಿರುದ್ಧ  ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ರಾಷ್ಟ್ರಪ್ರೇಮ ಇರುವ ಪ್ರತಿಯೊಬ್ಬರೂ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತಾರೆ. ಆದರೆ, ಬೀಟ್‌ ವ್ಯಾಪ್ತಿಯಲ್ಲಿ ಧ್ವಜಾರೋಹಣ ನಡೆಸಬೇಕೆಂದು ಸೂಚನೆ ನೀಡುವ ಅಗತ್ಯವೇನಿದೆ? ಯಾವೆಲ್ಲ ಪೂರ್ವ ಸಿದ್ಧತೆ ಮಾಡಲಾಗುತ್ತಿದೆ ಎನ್ನುವ ಮಾಹಿತಿಯನ್ನು ಪ್ರತಿದಿನವೂ ಎಎಸ್‌ಐ, ಪಿಎಸ್ಐ ಅವರಿಗೆ ತಲುಪಿಸಬೇಕು. ರಾಷ್ಟ್ರಧ್ವಜ, ಕಂಬ, ಅದರ ಗುಂಡಿ ತೆಗೆಯಲು ಹಾಗೂ ಧ್ವಜಾರೋಹಣಕ್ಕೆ ಬಂದವರಿಗೆ ಸಿಹಿ ವಿತರಿಸಲು ಕನಿಷ್ಠ  ₹2 ಸಾವಿರವಾದರೂ ವೆಚ್ಚವಾಗುತ್ತದೆ. ಅದನ್ನು ಬೀಟ್‌ ಪೊಲೀಸರೇ ಭರಿಸಬೇಕು. ಸಿಬ್ಬಂದಿಗೆ ಒತ್ತಡ ಹೇರುತ್ತ ಕಿರಿಕಿರಿ ನೀಡಲಾಗುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪೊಲೀಸ್‌ ಕಮಿಷನರ್‌ ಲಾಭೂರಾಮ್‌, ‘ಬೀಟ್‌ ವ್ಯಾಪ್ತಿಯಲ್ಲಿ ಧ್ವಜಾರೋಹಣ ನಡೆಸುವ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ಆ ಕುರಿತು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು