ಶುಕ್ರವಾರ, ಅಕ್ಟೋಬರ್ 23, 2020
26 °C
ನಗರದ ವಿವಿಧೆಡೆ ಗಾಂಧಿ ಜಯಂತಿ; ಪ್ರತಿಮೆಗೆ ಮಾಲಾರ್ಪಣೆ; ಲಾಲ್ ‌ಬಹದ್ಧೂರ್ ಶಾಸ್ತ್ರಿ ಸ್ಮರಣೆ

ಹುಬ್ಬಳ್ಳಿ: ಅಹಿಂಸಾ ಮೂರ್ತಿ ‘ಗಾಂಧಿ’ಗೆ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ವಿವಿಧೆಡೆ ಮಹಾತ್ಮ ಗಾಂಧೀಜಿ ಜನ್ಮದಿನವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ–ಕಾಲೇಜುಗಳಲ್ಲಿ, ರಾಜಕೀಯ ಪಕ್ಷಗಳು ಹಾಗೂ ಸಂಘ–ಸಂಸ್ಥೆಗಳ ಕಚೇರಿಗಳಲ್ಲಿ ಅಹಿಂಸಾವಾದಿಯ ಸ್ಮರಣೆ ನಡೆಯಿತು. ಜತೆಗೆ, ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರನ್ನು ಕೆಲವೆಡೆ ಸ್ಮರಿಸಲಾಯಿತು.

ಕಿಮ್ಸ್ ಆಸ್ಪತ್ರೆಯ ದ್ವಾರದ ಬಳಿ ಇರುವ ಗಾಂಧೀಜಿ ಪ್ರತಿಮೆಯನ್ನು ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೇ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು.‌

ಸರಳ ವ್ಯಕ್ತಿತ್ವದ ಗಾಂಧಿ:

‘ಗ್ರಾಮ ಸ್ವರಾಜ್ಯದ ಕಲ್ಪನೆ, ಖಾದಿ, ಚಕರ, ಅಹಿಂಸೆ, ಸ್ವಚ್ಛತೆ, ನೈತಿಕತೆ, ಮದ್ಯಪಾನ ನಿಷೇಧ, ಸರ್ವೋದಯದ ಮಾರ್ಗಗಳನ್ನು ದೇಶಕ್ಕೆ ಕೊಟ್ಟ ಮಹಾತ್ಮ ಗಾಂಧೀಜಿಯ ಸರಳ ವ್ಯಕ್ತಿತ್ವದವರಾಗಿದ್ದರು’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಜೆಡಿಎಸ್ ವತಿಯಿಂದ ಜರುಗಿದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಅವರು ಮಾತನಾಡಿದರು.

ಜೆಡಿಎಸ್ ಮುಖಂಡ ಎನ್‌.ಎಚ್. ಕೋನರಡ್ಡಿ ಮಾತನಾಡಿ, ‘ಯುವಜನರು ಗಾಂಧೀಜಿ ಮತ್ತು ಶಾಸ್ತ್ರಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು. 

ಮುಖಂಡರಾದ ರಾಜಣ್ಣ ಕೊರವಿ, ಶಿವಶಂಕರ ಕಲ್ಲೂರ, ಸಿದ್ದು ತೇಜಿ, ಸಾದೀಕಖಾನ ಹಕೀಂ, ಅಫ್ರೋಜ್ ಮಂಜನಕೊಪ್ಪ, ವಿನಾಯಕ ಗಾಡಿವಡ್ಡರ, ಪರ್ವೇಜ ಕಟ್ಟಿಮನಿ, ಶ್ರೀಕಾಂತ ಯಲಿಗಾರ, ಬಾಷಾ ಮುದಗಲ, ಹಸನಸಾಬ ಗಡ್ಡ ಇದ್ದರು.

ಗಟ್ಟಿ ಅಡಿಪಾಯ:

‘ಗಾಂಧೀಜಿ ಅವರ ಸತ್ಯ, ಅಹಿಂಸೆ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ, ಭಾರತದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಗಟ್ಟಿ ಅಡಿಪಾಯಗಳಾಗಿವೆ’ ಎಂದು ಎಸ್‌ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಕಾಲೇಜಿನ ಪ್ರಚಾರ್ಯ ಡಾ.ಎಲ್‌.ಆರ್. ಅಂಗಡಿ ಹೇಳಿದರು.

ಕಾಲೇಜಿನಲ್ಲಿ ಜರುಗಿದ ಗಾಂಧಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗಾಂಧೀಜಿ ಅವರು, ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಯ ಮೂಲಕ ಸ್ವಾತಂತ್ರ್ಯ ಚಳುವಳಿಯ ವೇಗ ಹೆಚ್ಚಿಸಿದರು. ಆ ಮೂಲಕ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು’ ಎಂದರು.

ಉಪನ್ಯಾಸಕಿ ವಿಜಯಾ ಕುಲಕರ್ಣಿ ವಿಶೇಷ ಉಪನ್ಯಾಸ ನೀಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಹದೇವ ಹರಿಜನ, ಪಿಯು ಕಾಲೇಜಿನ ಪ್ರಾಚಾರ್ಯೆ ಅನುರಾಧ ಹೊಸಕೋಟೆ, ಉಪನ್ಯಾಸಕ ವಿಕಾಸ ರಬಕವಿಮಠ, ಪ್ರಾಧ್ಯಾಪಕರಾದ ಡಾ. ಗುರುರಾಜ ನವಲಗುಂದ, ಡಾ. ತಾಯಣ್ಣ, ಪ್ರೊ. ಶಿವಕುಮಾರ ಪ್ರಭಯ್ಯನವರಮಠ, ಪ್ರೊ. ಶಶಾಂಕ, ಡಾ. ಸುಪ್ರಿಯಾ ಮಲಶೆಟ್ಟಿ ಇದ್ದರು.

ಡಾಲರ್ಸ್ ಕಾಲೋನಿ ನಿವಾಸಿಗಳ ಸಂಘ:

ಗೋಕುಲ ರಸ್ತೆಯ ಡಾಲರ್ಸ್ ಕಾಲೋನಿ ನಿವಾಸಿಗಳ ಸಂಘದಿಂದ, ಇಲ್ಲಿನ ಉದ್ಯಾನದಲ್ಲಿ ಗಾಂಧಿ ಜಯಂತಿ ಅಂಗವಾಗಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಆಶಾ ಮಿರಜಕರ, ಕಾರ್ಯದರ್ಶಿ ರಾಕೇಶ ಕೊರಡೆ, ಖಜಾಂಜಿ ಸರಳಾ ಗಣೇಶ, ಸದಸ್ಯರಾದ ಲಕ್ಷ್ಮಿ ದೇಸಾಯಿ, ವಾಣಿ ದೇಸಾಯಿ, ಕೆ.ಎಂ. ಸವಣೂರು, ಎಸ್.ಬಿ. ಪಾಶ್ಚಾಪೂರ, ಎಸ್‌.ಎನ್. ಪಡಸಲಮನಿ, ಮಂಜುನಾಥ ಬಗಾಡೆ, ಉದಯ ಪುರಾಣಿಕ, ರಘು ಮಿರಜಕರ್, ದಾದಾಪಿರ ಯಾದಗಿರಿ ಇದ್ದರು.

ಸಾಖರೆ ಶಾಲೆ:

ಎಂ.ಆರ್. ಸಾಖರೆ ಸಿಬಿಎಸಿಇ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆನ್‌ಲೈನ್ ಮೂಲಕ ಆಚರಿಸಲಾಯಿತು. ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಚಾರ್ಯೆ ಶರ್ಮಿಳಾ ಹೇಮಂತ, ಶಿಕ್ಷಕಿ ನೀಲಂ ವಾರದ ಮಾತನಾಡಿದರು.

ರೇವಣಸಿದ್ಧೇಶ್ವರ ಶಾಲೆ:

ಹಳೇ ಹುಬ್ಬಳ್ಳಿಯ ಸಿದ್ಧಾರೂಢ ನಗರದ ರೇವಣಸಿದ್ಧೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸಿದ್ಧಾರೂಢ ಮಠದ ಗೋಪುರ ಪೂಜೆ ಹಾಗೂ ಶಾಲೆಯ ಕಟ್ಟಡಕ್ಕೆ ಸ್ಲ್ಯಾಬ್ ಹಾಕುವ ಮೂಲಕ, ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಜಯಂತಿ ಆಚರಿಸಲಾಯಿತು. ಚಿಕ್ಕ ರೇವಣಸಿದ್ಧ ಶಿವಶರಣ ಸ್ವಾಮೀಜಿ, ಶಿವಮೂರ್ತಿ ದೇವನೂರ, ಪರಮೇಶ್ವರ ಗುರುನಾಥಪ್ಪ ಬೈನವರ, ದೇವೇಂದ್ರ ಪಾಟೀಲ, ಶಾಲೆಯ ಶಿಕ್ಷಕರು ಇದ್ದರು.

ಗ್ರೋಯಿಂಗ್ ಬಡ್ಸ್ ಶಾಲೆ:

ಕೇಶ್ವಾಪುರದ ಗ್ರೋಯಿಂಗ್ ಬಡ್ಸ್ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಶಾಲೆ ಅಧ್ಯಕ್ಷ ಎಚ್‌.ಬಿ. ಮ್ಯಾಗೇರಿ, ಪ್ರಾಚಾರ್ಯೆ ಯಶೋದಾ ಬಂಡಿವಡ್ಡರ, ಸುರೇಖಾ ಇರಕಲ್ ಇದ್ದರು.

ಅಂಜುಮನ್ ಎ ಇಸ್ಲಾಂ:

ನಗರದ ಅಂಜುಮನ್ ಎ ಇಸ್ಲಾಂ ವತಿಯಿಂದ ಗಾಂಧಿ ಜಯಂತಿ ಆಚರಿಸಲಾಯಿತು. ಸಮಿತಿ ಅಧ್ಯಕ್ಷ ಯೂಸುಫ ಸವಣೂರ, ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಅಲ್ತಾಫ ಕಿತ್ತೂರ, ಆಸ್ಪತ್ರೆ ಮಂಡಳಿ ಕಾರ್ಯರ್ಶಿ ಎಂಎ. ಪಠಾಣ್, ಸದಸ್ಯರಾದ ಸಮಿವುಲ್ಲಾ ಬೆಳಗಾಂ, ಸಲೀಂ ಅಹ್ಮದ್, ಹಸನ್‌ಖಾನ್ ಜಾಹೀರದಾರ, ಎಂ. ಮಕಾಂದಾರ, ಶಫಿ ಗದಗ, ಜೈಲಾನಿ ಬ್ಯಾಡಗಿ, ಮೊಬಿನ್ ಸಾಬ್ ಇದ್ದರು.

ಗಾಂಧಿ ಮೂರ್ತಿ ಅನಾವರಣ

ನೈರುತ್ಯ ರೈಲ್ವೆಯ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಮೂರ್ತಿಯನ್ನು ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ಅನಾವರಣಗೊಳಿಸಿ, ಪುಷ್ಪನಮನ ಸಲ್ಲಿಸಿದರು. ಬಳಿಕ, ಇತ್ತೀಚೆಗೆ ಮಕ್ಕಳಿಗೆ ಜರುಗಿದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಬಹುಮಾನ ವಿತರಿಸಿದರು.

ರೈಲ್ವೆ ಕಾಲೊನಿಯ ಉದ್ಯಾನಕ್ಕೆ ಲಾಲ್‌ ಬಹದ್ದೂರ್ ಶಾಸ್ತ್ರಿ ಎಂದು ನಾಮಕರಣ ಮಾಡಲಾಯಿತು. ವಲ್ಲಭಬಾಯಿ ನಗರದಲ್ಲಿರುವ ಸರ್ವೋದಯ ಉದ್ಯಾನವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಯಿತು.

ಸ್ಪರ್ಧೆಯ ವಿಜೇತರ ಮಾಹಿತಿ:

8 ವರ್ಷದೊಳಗಿನವರ ವಿಭಾಗ: ವರುಣ್ ಮಾಲೇಕರ್–ಪ್ರಥಮ, ಟಿ. ದೇವಿಪ್ರಿಯಾ– ದ್ವಿತೀಯ, ತೇಜಸ್ವಿನಿ ಪೂಜಾರ– ತೃತೀಯ. 8ರಿಂದ 12 ವರ್ಷದೊಳಗಿನ ವಿಭಾಗ: ಆಕಾಂಕ್ಷ ಮುಂದಿನಮನಿ–ಪ್ರಥಮ, ಅಕ್ಷಿತಾ ಗೋಯಲ್ –ದ್ವಿತೀಯ, ಅಪೂರ್ವಾ ಎಂ.ಎಚ್.–ತೃತೀಯ. 12ರಿಂದ 16 ವರ್ಷದೊಳಗಿನ ವಿಭಾಗ: ಕಿಶನ್ ಪೂಜಾರಿ–ಪ್ರಥಮ, ರಾಜನಂದಿನಿ ಠಾಕೂರ್– ದ್ವಿತೀಯ, ನಿರಂಜನ ಶೀಲವಂತ–ತೃತೀಯ.

ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲ್ಕಡೆ, ಕ್ರೀಡಾ ಸಂಘದ ಅದ್ಯಕ್ಷ ಎಸ್‌.ಎಸ್‌. ಕಟವಾರೆ, ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಸುಜಾತ ಸಿಂಗ್, ಮೀನಲ್ ಜಿ., ಪಿ. ರವಿಕುಮಾರ್, ವಿಲಾಸ್ ಜಿ., ರಾಮಾನುಜಂ, ರೂಪಾ ಶ್ರೀನಿವಾಸನ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು