ಗುರುವಾರ , ಮೇ 19, 2022
20 °C

ಗೋಕುಲ: ಜಾತ್ರಾ ಕಾರ್ಯಕ್ರಮಗಳು ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಗೋಕುಲ ಗ್ರಾಮದ ಹನುಮಾನ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಏಪ್ರಿಲ್‌ 8ರಿಂದ 16ರ ವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಏಪ್ರಿಲ್‌ 8ರಿಂದ 15ರ ವರೆಗೆ ಪ್ರತಿದಿನ ಸಂಜೆ 7.30ಕ್ಕೆ ನಿಂಗಪ್ಪ ಮ್ಯಾಗೇರಿ ಅವರು ದೇವಸ್ಥಾನದಲ್ಲಿ ‘ಸುಂದರಕಾಂಡ ರಾಮಾಯಣ’ ಪ್ರವಚನ ನಡೆಸಿಕೊಡಲಿದ್ದು, ನಂತರ ಅನ್ನಪ್ರಸಾದ ನಡೆಯಲಿದೆ. ಏಪ್ರಿಲ್‌ 15ರ ರಾತ್ರಿ 10ಕ್ಕೆ ಗೋಕುಲ ಗ್ರಾಮದ ಎಲ್ಲ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮಗಳು ನಡೆಯಲಿವೆ.

ಏಪ್ರಿಲ್‌ 16ರ ಬೆಳಿಗ್ಗೆ 4ಕ್ಕೆ ದೇವರ ಮೂರ್ತಿಗೆ ಅಭಿಷೇಕ, 7ಕ್ಕೆ ಮಹಾಮಂಗಳಾರತಿ, 9ಕ್ಕೆ ಹನುಮಂತ ದೇವರ ತೊಟ್ಟಿಲೋತ್ಸವ, ಪ್ರವಚನ, ಮಂಗಳ ಕಾರ್ಯಕ್ರಮಗಳು ನಡೆಯಲಿವೆ. ನಂತರ ಸಂಜೆ 5ಕ್ಕೆ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು