ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಲ್ಲಿ ಉತ್ತಮ ಕೆಲಸ: ಮಿಶ್ರಾ ಮೆಚ್ಚುಗೆ

Last Updated 15 ಆಗಸ್ಟ್ 2020, 15:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್‌ಅವಧಿಯಲ್ಲಿ ಕಾರ್ಮಿಕರನ್ನು ಶ್ರಮಿಕ ಎಕ್ಸ್‌ಪ್ರೆಸ್‌ ಮೂಲಕ ತಮ್ಮೂರುಗಳಿಗೆ ತಲುಪಿಸಲು ರೈಲ್ವೆ ಸಿಬ್ಬಂದಿ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ನೈರುತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ ಮೆಚ್ಚುಗೆ ವ್ಯಕ್ತಪಡಿಸಿದರು.

ಗದಗ ರಸ್ತೆಯಲ್ಲಿರುವ ನೈರುತ್ಯ ರೈಲ್ವೆ ಕಚೇರಿಯಲ್ಲಿಶನಿವಾರಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ’ನೈರುತ್ಯ ರೈಲ್ವೆಯು ಮೇ ಯಿಂದ ಇಲ್ಲಿಯ ತನಕ 266 ಶ್ರಮಿಕ ರೈಲುಗಳ ಮೂಲಕ 3.9 ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಿದೆ. ನಾಲ್ಕು ತಿಂಗಳ ಅವಧಿಯಲ್ಲಿ ರೈಲಿನ ಮೂಲಕ2,122 ಟನ್‌ ಆಹಾರ ಸಾಮಗ್ರಿ ಸಾಗಿಸಲಾಗಿದೆ’ ಎಂದರು.

ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದ ಬಳಿಕ ಕೋವಿಡ್‌ ವಾರಿಯರ್‌ಗಳಿಗೆ ಸನ್ಮಾನಿಸಿದರು.ಮುಖ್ಯ ಎಲೆಕ್ಟ್ರಿಕಲ್‌ ಎಂಜಿನಿಯರ್‌ ಬಿ.ಜಿ. ಮಲ್ಯಾ, ಮುಖ್ಯ ಹಣಕಾಸು ಸಲಹೆಗಾರ್ತಿ ರೂಪಾ ಶ್ರೀನಿವಾಸನ್‌, ಪ್ರಮುಖ ಅಧಿಕಾರಿಗಳಾದ ಹರೀಶಕುಮಾರ್ ವರ್ಮಾ, ಆರ್‌.ಎಸ್‌. ಚೌಹಾಣ್‌, ಅನಿಲ್ ಪವಿತ್ರನ್‌, ಅಜಯ ಕುಮಾರ್‌ ಪಾಲ್ಗೊಂಡಿದ್ದರು.

ಹುಬ್ಬಳ್ಳಿ ವಿಭಾಗ: ಹುಬ್ಬಳ್ಳಿ ವಿಭಾಗೀಯ ಕಾರ್ಯಾಲದದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಧ್ವಜಾರೋಹಣ ನೆರವೇರಿಸಿ ’ಪ್ರಸಕ್ತ ಆರ್ಥಿಕ ವರ್ಷದ ಜುಲೈ ಅಂತ್ಯಕ್ಕೆ ಹುಬ್ಬಳ್ಳಿ ವಿಭಾಗವು 8.74 ಮಿಲಿಯನ್ ಟನ್ ಸರಕು ಸಾಗಣೆ ಮಾಡಿ ₹730.20 ಕೋಟಿ ಆದಾಯ ಗಳಿಸಿದೆ’ ಎಂದರು.

ಕೋವಿಡ್‌ ಸಮಯದಲ್ಲಿ ಅರ್ಪಣಾ ಮನೋಭಾವದಿಂದ ಕೆಲಸ ಮಾಡಿದ 36 ಸಿಬ್ಬಂದಿಗೆ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆ ಹುಬ್ಬಳ್ಳಿ ವಿಭಾಗದ ಅಧ್ಯಕ್ಷೆ ಮೀನಲ್‌ ಗಾಂಧಿ ಸನ್ಮಾನಿಸಿದರು.ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಎಸ್‌.ಕೆ.ಝಾ,ವಿಭಾಗೀಯ ಭದ್ರತಾ ಆಯುಕ್ತರಾದ ವಿಶ್ವಾಸ ಕುಮಾರ್,ವಲ್ಲೇಶ್ವರ ಬಿ.ಟಿ., ಸಿಬ್ಬಂದಿ ಕ್ರಿಸ್ಟಿನ್‌ ಬೋರ್ಗೋಹಾಯ್ನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT