ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಟ್ರಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

Published 19 ಆಗಸ್ಟ್ 2024, 13:07 IST
Last Updated 19 ಆಗಸ್ಟ್ 2024, 13:07 IST
ಅಕ್ಷರ ಗಾತ್ರ

ಕಂಪ್ಲಿ: ತಾಲ್ಲೂಕಿನ ಮೆಟ್ರಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಸಿ.ಡಿ.ಗುಂಡಮ್ಮ ಮತ್ತು ಉಪಾಧ್ಯಕ್ಷರಾಗಿ ಬಿ.ಗಿರೀಶ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

ತಾಲ್ಲೂಕು ಪಂಚಾಯಿತಿ ಇಒ ಆರ್.ಕೆ.ಶ್ರೀಕುಮಾರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಪಿಡಿಒ ಶ್ರೀಶೈಲಗೌಡ, ಕಾರ್ಯದರ್ಶಿ ಎಚ್. ಹುಲುಗಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಜಡೆಪ್ಪ, ಎಚ್.ಹೊನ್ನೂರಮ್ಮ, ಮಲ್ಲಮ್ಮ, ಸಿ.ಡಿ. ಮಹಾಂತೇಶ, ರತ್ನಮ್ಮ, ಎಚ್.ಕುಮಾರಸ್ವಾಮಿ, ಕರಿಬಸಮ್ಮ, ಜಯಲಕ್ಷ್ಮಿ, ಅಂಗಡಿ ಲೋಕೇಶ, ನಾಗಮ್ಮ, ಎಸ್. ಕುಶಲಪ್ಪ, ಉಡೇದ ತಿಮ್ಮಪ್ಪ, ಅಂಗಡಿ ನಾಗರಾಜ, ರೇವತಮ್ಮ, ಸಿಂಧಿಗೇರಿ ಲಕ್ಷ್ಮಿ, ಗುಡಿಸಲು ಹನುಮಮ್ಮ, ಹರಿಜನ ದೇವೇಂದ್ರಪ್ಪ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಬಳಿಕ ನಡೆದ ಸಮಾರಂಭದಲ್ಲಿ ಗ್ರಾಮಸ್ಥರು, ಗ್ರಾಮದ ಮುಖಂಡರು ಪಾಲ್ಗೊಂಡು ಅಭಿನಂದಿಸಿದರು.

ಬಿ. ಗಿರೀಶ್
ಬಿ. ಗಿರೀಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT