ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ‘ಅರಿವಿನ ದಾರಿ’ ಗ್ರಂಥ ಲೋಕಾರ್ಪಣೆ

Published 4 ಜೂನ್ 2023, 11:17 IST
Last Updated 4 ಜೂನ್ 2023, 11:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕನ್ನಡ ಸಾಹಿತ್ಯ ಪರಿಷತ್‌, ಅಕಾಡೆಮಿಗಳು ಮತ್ತು ಮಹಾವಿದ್ಯಾಲಯದಲ್ಲಿನ ಕನ್ನಡ ವಿಭಾಗಗಳು ಕನ್ನಡದ ಪ್ರಶಸ್ತಿ ಪುರಸ್ಕೃತ ಕೃತಿಗಳ ಕುರಿತು ವಿಚಾರ ಸಂಕಿರಣ, ಚರ್ಚೆ ಕಾರ್ಯಾಗಾರ ಹಮ್ಮಿಕೊಂಡು ಕೃತಿಕಾರರ ವಿಚಾರ ಧಾರೆಗಳನ್ನು ಸಮಾಜಕ್ಕೆ ತಲುಪಿಸಬೇಕು’ ಎಂದು ಕವಿವಿ ಕನ್ನಡ ಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕ ಡಾ. ವೀರಣ್ಣ ರಾಜೂರ ಹೇಳಿದರು.

ನಗರದ ಕಿಮ್ಸ್‌ನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಅಕ್ಷರ ಸಾಹಿತ್ಯ ವೇದಿಕೆ ಹಾಗೂ ರಾಜ ವಿನಯ ಪ್ರಕಾಶನ ಆಯೋಜಿಸಿದ್ದ ಪ್ರೊ. ಶಿವಪುತ್ರಪ್ಪ ಆರ್. ಆಶಿ ಅವರು ಬರೆದ ‘ಅರಿವಿನ ದಾರಿ’ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು. ‘ಶರಣರ ಚಿಂತನೆಗಳು ಸಮಾಜಕ್ಕೆ ತಲುಪಿಸಬೇಕು. ವಚನ ಸಾಹಿತ್ಯ ಶರಣರ ಅನುಭಾವಗಳಾಗಿದ್ದು, ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆತ್ಮ ವಿಕಾಸಕ್ಕೆ ಗ್ರಂಥಗಳು ಸಹಕಾರಿಯಾಗಿವೆ’ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ. ಜೆ.ಎಂ. ನಾಗಯ್ಯ, ಸಾಹಿತಿ ಚನ್ನಪ್ಪ ಅಂಗಡಿ, ನಿವೃತ್ತ ಪ್ರಾಚಾರ್ಯ ಡಾ. ಭಾರತಿ ಹಿರೇಮಠ, ಅಕ್ಷರ ಸಾಹಿತ್ಯ ವೇದಿಕೆ ಅಧ್ಯಕ್ಷ ಎಂ.ಬಿ. ಅಡ್ನೂರ, ಸಾಹಿತಿ ಮಹಾಂತಪ್ಪ ನಂದೂರ, ಕೃತಿಕಾರ ಶಿವಪುತ್ರಪ್ಪ ಆಶಿ ಮಾತನಾಡಿದರು. ಸಾಹಿತಿ ಸಿ.ಎಂ. ಮುನಿಸ್ವಾಮಿ, ಎಸ್.ಎಸ್. ಕರಡಿ, ಎ.ಎಸ್. ಚಿತ್ರಾ, ಡಾ. ಬಿ.ಎಸ್. ಮಾಳವಾಡ, ರೂಪಾ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT