ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಮಹಾನಗರ ಪಾಲಿಕೆ: ಮಧ್ಯರಾತ್ರಿ ಕೈ ಸೇರಿದ ಮತದಾರರ ಕರಡು ಪಟ್ಟಿ

ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮನೆಗೆ ತಲುಪಿಸಿದ ಪಾಲಿಕೆ ಅಧಿಕಾರಿಗಳು
Last Updated 29 ಜೂನ್ 2021, 5:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಕರಡು ಪಟ್ಟಿಯನ್ನು ಸೋಮವಾರ ರಾತ್ರಿ ರಾಜಕೀಯ ಪಕ್ಷಗಳ ಕೆಲ ಪ್ರತಿನಿಧಿಗಳ ಕೈ ಸೇರಿದೆ. ಪಟ್ಟಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಬಿ. ಸುಶೀಲಾ ಅವರ ನೇತೃತ್ವದಲ್ಲಿ ಸಂಜೆ ಮಾನ್ಯತೆ ಪಡೆದ ಏಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಆಗ, ಪಟ್ಟಿ ಸಿದ್ಧವಿಲ್ಲದಿದ್ದರಿಂದ ಪ್ರತಿನಿಧಿಗಳು ಬರಿಗೈಲಿ ವಾಪಸ್ಸಾಗಿದ್ದರು.

ಪಾಲಿಕೆ ಈಗಾಲೇ ಪ್ರಕಟಣೆಯಲ್ಲಿ ತಿಳಿಸಿದ ಪ್ರಕಾರ, ಪಟ್ಟಿ ಬಿಡುಗಡೆಯಾಗಿದ್ದರೆ ಆಕ್ಷೇಪಣೆ ಸಲ್ಲಿಕೆಗೆ ಮೂರು ದಿನ ಅವಕಾಶ ಸಿಗುತ್ತಿತ್ತು. ಆದರೆ, ಅಂದುಕೊಂಡಂತೆ ಪಟ್ಟಿ ವಿತರಿಸಲು ವಿಫಲವಾಗಿದ್ದರಿಂದ ಆಕ್ಷೇಪಣೆಗೆ ಇದ್ದ ದಿನಗಳ ಪೈಕಿ ಒಂದು ದಿನ ಕಡಿಮೆಯಾಗಿದೆ ಎಂದು ಪಕ್ಷಗಳ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಆಕ್ಷೇಪಣೆ ಸಲ್ಲಿಸಲು ಈಗಾಗಲೇ ನಿಗದಿಪಡಿಸಿದ್ದ ಮೂರು ದಿನವೂ ಅತ್ಯಂತ ಕಡಿಮೆ ಇದೆ. ಈ ಕುರಿತು ಆಯುಕ್ತರನ್ನು ಕೇಳಿದಾಗ, ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲಾ ಪ್ರಕ್ರಿಯೆಗಳನ್ನು ನಡೆಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದ್ದರು. ಪಟ್ಟಿ ನೀಡುವುದಾಗಿ ಹೇಳಿ ಅರ್ಧ ತಾಸು ಕಾಯಿಸಿದರು. ವಿಧಾನಸಭಾ ಕ್ಷೇತ್ರಗಳವಾರು ಮತದಾರರ ಮಾಹಿತಿಯಷ್ಟೇ ನೀಡಿದರು. ಕಡೆಗೆ ಎಲ್ಲಾ ರಾಜಕೀಯ ಪ್ರತಿನಿಧಿಗಳು ವಾಪಸ್ಸಾದೆವು. ನಂತರ ರಾತ್ರಿ 10.40ರ ಸುಮಾರಿಗೆ ಪಾಲಿಕೆ ಸಿಬ್ಬಂದಿ ಕರಡು ಪಟ್ಟಿಯ ಬಂಡಲ್ ಅನ್ನು ಮನೆಗೆ ತಲುಪಿಸಿದರು’ ಎಂದು ಬಹುಜನ ಸಮಾಜ ಪಕ್ಷದ ಮುಖಂಡ ಪ್ರೇಮನಾಥ ಚಿಕ್ಕತುಂಬಳ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುದ್ರಣ ಕಾರ್ಯ ವಿಳಂಬವಾಗಿರುವುದರಿಂದ ಜೂನ್‌ 29ರಂದು ಬೆಳಿಗ್ಗೆ ಪಟ್ಟಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ, ಸಭೆ ಮುಗಿಸಿಕೊಂಡು ಎಲ್ಲರೂ ವಾಪಸ್ಸಾದೆವು’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಪ್ರಕಾಶ ಹಳ್ಯಾಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT