ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ

Last Updated 26 ಸೆಪ್ಟೆಂಬರ್ 2020, 4:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ದಿನಗಳಿಂದ ನಗರದಲ್ಲಿ ಮೇಲಿಂದ ಮೇಲೆ ಮಳೆ ಸುರಿಯುತ್ತಿದೆ. ಶುಕ್ರವಾರ ರಾತ್ರಿ ಆರಂಭವಾದ ಮಳೆ ಶನಿವಾರ ಬೆಳಿಗ್ಗೆಯೂ ಮುಂದುವರದಿದೆ. ರಾತ್ರಿ ಪೂರ್ತಿ ಮಳೆ ಬಂದಿದೆ.

ಇದರಿಂದಾಗಿ ವಾಣಿಜ್ಯ ನಗರಿ‌ ಮಲೆನಾಡು ಆದಂತಾಗಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಆಗಾಗ ಮಳೆ ಬಂದು, ಬಳಿಕ ಬಿಸಿಲು ಬೀಳುತ್ತಿತ್ತು. ಸಂಜೆಯಿಂದ ಮಳೆ ನಿರಂತರವಾಗಿದೆ.

ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಬ್ಯಾಹಟ್ಟಿ, ಕುಸುಗಲ್, ನೂಲ್ವಿ, ಅದರಗುಂಚಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯಾಗಿದೆ. ಇದರಿಂದ ಪತ್ರಿಕೆ ‌ಹಂಚುವ ಹುಡುಗರು, ಹಾಲು ಹಾಕುವವರು ತರಕಾರಿ ವ್ಯಾಪಾರಿಗಳು ನಿತ್ಯದ ಕಾಯಕಕ್ಕೆ ಪರದಾಡಬೇಕಾಯಿತು.

ಉಣಕಲ್ ಕೆರೆ ಪಾರ್ಕ್, ನೃಪತುಂಗ ಬೆಟ್ಟ, ನೆಹರೂ ಮೈದಾನ, ರೈಲ್ವೆ ಮೈದಾನ, ಕುಂಭಕೋಣಂ ಪ್ಲಾಂಟ್ ಹೀಗೆ ಪ್ರಮುಖ ಸ್ಥಳಗಳಲ್ಲಿ ಜನ ನಿತ್ಯ ಬೆಳಿಗ್ಗೆ ವಾಕಿಂಗ್ ಮಾಡಲು ಬರುತ್ತಿದ್ದರು. ಮಳೆಯ ಕಾರಣ ಎಲ್ಲಿಯೂ ಜನ ಕಾಣಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT