ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

34 ವರ್ಷಗಳ ದಾಖಲೆ ಮುರಿದ ಹೊನ್ನಾವರ ಕಾಲೇಜು

ಅಂತರ ಕಾಲೇಜುಗಳು ಅಥ್ಲೆಟಿಕ್‌: 4X100 ಮೀ. ರಿಲೆಯಲ್ಲಿ ಸಾಧನೆ
Last Updated 10 ಡಿಸೆಂಬರ್ 2019, 16:32 IST
ಅಕ್ಷರ ಗಾತ್ರ

ಧಾರವಾಡ: ಹೊನ್ನಾವರದ ಎಂಪಿಇ ಎಸ್‌ಡಿಎಂ ಕಾಲೇಜು ತಂಡ, ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳು ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಮಂಗಳವಾರ 34 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿ ಚಿನ್ನದ ಪದಕ ಜಯಿಸಿತು.

ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ 4X100 ಮೀಟರ್ ರಿಲೆಯಲ್ಲಿ 43.72 ಸೆಕೆಂಡುಗಳಲ್ಲಿ ಗುರಿ ಮುಟ್ಟಿ 1985ರಲ್ಲಿ ಧಾರವಾಡದಲ್ಲಿ ನಡೆದಿದ್ದ ಕೂಟದಲ್ಲಿ ಪಿ.ಸಿ. ಜಾಬಿನ ಕಾಲೇಜು ತಂಡದ (ಕಾಲ: 44.07ಸೆ.) ಸಾಧನೆ ಅಳಿಸಿ ಹಾಕಿತು. ಇದೇ ಸ್ಪರ್ಧೆಯಲ್ಲಿ ಜೆಎಸ್‌ಎಸ್‌ ಬನಶಂಕರಿ ಕಾಲೇಜು ಎರಡನೇ ಸ್ಥಾನ ಮತ್ತು ಕೆಎಲ್‌ಇ ಸಂಸ್ಥೆಯ ಎಸ್‌.ಕೆ. ಕಲಾ ಮತ್ತು ಎಚ್‌ಎಸ್‌ಕೆ ವಿಜ್ಞಾನ ಕಾಲೇಜು ತೃತೀಯ ಸ್ಥಾನ ಗಳಿಸಿತು.

ಎರಡನೇ ದಿನದ ಫಲಿತಾಂಶ:

ಪುರುಷರ ವಿಭಾಗ: 110 ಮೀ. ಹರ್ಡಲ್ಸ್‌: ಆರ್‌. ವಿನಾಯಕ (ಕೆಎಲ್‌ಇ ಸಂಸ್ಥೆಯ ಎಸ್‌.ಕೆ. ಕಲಾ ಮತ್ತು ಎಚ್‌ಎಸ್‌ಕೆ ವಿಜ್ಞಾನ ಕಾಲೇಜು; ಕಾಲ: 18.11ಸೆ.)–1 ಸುದೀಪ ನಾಯ್ಕ (ಎಂಪಿಇ ಎಸ್‌ಡಿಎಂ ಕಾಲೇಜು, ಹೊನ್ನಾವರ)–2, ಸಮೀರ (ಜೆಎಸ್‌ಎಸ್‌ ಬನಶಂಕರಿ ಕಾಲೇಜು, ಧಾರವಾಡ)–3.

5000 ಮೀ. ಓಟ: ರಾಜು ಪರಗಣ್ಣವರ (ಜೆಎಸ್‌ಎಸ್‌ ಮಂಜುನಾಥೇಶ್ವರ ಕಾಲೇಜು; 15:56.17ಸೆ.)–1, ಬಿ. ಪ್ರಸಾದ ಕುಮಾರ (ಕೆಎಲ್‌ಇ ಜಗದ್ಗುರು ಪ್ರಸಾದ ಕುಮಾರ)–2, ವರುಣ ಅಪ್ಪರಾಜ (ಜೆಎಸ್‌ಎಸ್‌ ಮಂಜುನಾಥೇಶ್ವರ)–3.

ಮಹಿಳೆಯರ ವಿಭಾಗ: 1500 ಮೀ. ಓಟ: ಅನಿತಾ ಓಲೇಕಾರ (ಜೆಎಸ್‌ಎಸ್‌ ಮಂಜುನಾಥೇಶ್ವರ; 5:22.47ಸೆ.)–1, ಪಲ್ಲವಿ ಅಪ್ಪಿನಬೈಲ್ (ಕರ್ನಾಟಕ ವಿಜ್ಞಾನ ಕಾಲೇಜು, ಧಾರವಾಡ)–2, ಶ್ವೇತಾ ಹೊನ್ನಪ್ಪನವರ (ಜೆಎಸ್‌ಎಸ್‌ ಮಂಜುನಾಥೇಶ್ವರ ಕಾಲೇಜು)–3.

400 ಮೀ. ಓಟ: ಆರ್‌.ಎ. ಚೈತ್ರಾ (ಎಂವಿಎಎಸ್‌ ಕೆ.ಜಿ. ನಾಡಗೀರ್ ಕಾಲೇಜು, ಧಾರವಾಡ; 1:03.58ಸೆ.)–1, ಎಸ್‌. ಐಶ್ವರ್ಯಾ (ಜೆಎಸ್‌ಎಸ್‌ ಮಂಜುನಾಥೇಶ್ವರ)–2, ಅಕ್ಷತಾ ದೊಡ್ಡಮನಿ (ಜಿಎನ್‌ಡಬ್ಲ್ಯುಎಸ್‌ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಕಲಘಟಗಿ)–3.

ಹುಬ್ಬಳ್ಳಿಯ ವಿನಾಯಕ ದಾಖಲೆ

ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಎಸ್‌.ಕೆ. ಕಲಾ ಮತ್ತು ಎಚ್ಎಸ್‌ಕೆ ವಿಜ್ಞಾನ ಸಂಸ್ಥೆಯ ವಿನಾಯಕ ಸೊಟ್ಟಣ್ಣವರ 400 ಮೀ. ಓಟದ ಗುರಿಯನ್ನು 48.36 ಸೆಕೆಂಡ್‌ಗಳಲ್ಲಿ ತಲುಪಿ, 2017ರಲ್ಲಿ ಜೆಎಸ್ಎಸ್‌ ಬನಶಂಕರಿ ಕಾಲೇಜಿನ ಎಂ. ಅಶ್ವಿನ್‌ (ಕಾಲ: 48.74ಸೆ.) ಹೆಸರಿನಲ್ಲಿ ದಾಖಲೆ ಅಳಿಸಿ ಹಾಕಿದರು.

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಅಭಿಷೇಕ ಜಿ. ನಾಯ್ಕ (ಕಾಲ: 53.23ಸೆ.) ಬೆಳ್ಳಿ, ಜೆಎಸ್‌ಎಸ್‌ ಮಂಜುನಾಥೇಶ್ವರ ಕಾಲೇಜಿನ ಮನೀಷ ಪೂಜಾರಿ (ಕಾಲ: 53.58ಸೆ.) ಕಂಚು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT