ಹುಬ್ಬಳ್ಳಿ: ಮನೆ ಎದುರು ಬಂದು ಗಲಾಟೆ ಮಾಡಿದ ಕಾರಣಕ್ಕೆ ತಂದೆಯ ಎರಡನೇ ಪತ್ನಿಗೆ ಯುವಕನೊಬ್ಬ ಚಾಕುವಿನಿಂದ ಇರಿದ ಘಟನೆ ನಗರದ ಮಾಲ್ದಾರಬಾಡಾದಲ್ಲಿ ನಡೆದಿದೆ.

ಅಲ್ಫಿಯಾ (26) ಗಾಯಗೊಂಡವರು. ಅವರನ್ನು ಚಿಕಿತ್ಸೆಗಾಗಿ ಕೆಎಂಸಿ–ಆರ್ಐ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆರೋಪಿ ಮಲ್ಲಿಕ್ರೇಹಾನ್ ವಿರುದ್ಧ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅಡುಗೆ ಕೆಲಸ ಮಾಡಿಕೊಂಡಿರುವ ನಿಸಾರ್ಅಹ್ಮದ್ ಖಾನ್ ಅವರು ಕೌಸರ್ ಹಾಗೂ ಅಲ್ಪಿಯಾ ಅವರನ್ನು ಮದುವೆಯಾಗಿದ್ದರು. ಅವರಿಬ್ಬರಿಗೂ ಪ್ರತ್ಯೇಕ ಬಾಡಿಗೆ ಮನೆ ಮಾಡಿಕೊಟ್ಟಿದ್ದರು. ಮೊದಲ ಪತ್ನಿ ಕೌಸರ್ ಮನೆಗೆ ನಿಸಾರ್ಅಹ್ಮದ್ ಖಾನ್ ಹೋಗುವುದನ್ನು ಅಲ್ಫಿಯಾ ವಿರೋಧಿಸಿದ್ದರು. ಇದೇ ವಿಚಾರವಾಗಿ ಕೌಸರ್ ಮನೆ ಎದುರು ಹೋಗಿ ಅಲ್ಪಿಯಾ ಗಲಾಟೆ ಮಾಡಿದ್ದರು. ಇದರಿಂದ ಕೋಪಗೊಂಡ ಕೌಸರ್ ಅವರ ಮೊದಲ ಮಗ ಮಲ್ಲಿಕ್ರೇಹಾನ್, ಅಲ್ಪಿಯಾ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಲ್ಯಾಪ್ಟಾಪ್ ಕಳವು: ಇಲ್ಲಿನ ವಿದ್ಯಾನಗರದ ಬನಶಂಕರಿ ಬಡಾವಣೆಯ ನಿತೀನ್ ಥೋರುಶೆ ಅವರ ಮನೆಯಲ್ಲಿದ್ದ ₹40 ಸಾವಿರ ಮೌಲ್ಯದ ಲ್ಯಾಪ್ಟಾಪ್ ಕಳವಾಗಿದೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.