ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ಮತ್ತೆ ಅಪರಾಧ ಪ್ರಕಣಗಳು ಹೆಚ್ಚುತ್ತಿವೆ. ಒಂದರ ಹಿಂದೊಂದರಂತೆ ಅಪರಾಧ ಕೃತ್ಯಗಳು ನಡೆಯುತ್ತಿದ್ದು, ಸಾರ್ವಜನಿಕರ ನೆಮ್ಮದಿ ಕೆಡಿಸುತ್ತಿವೆ. ಪೊಲೀಸರಂತೂ ಬಂದೋಬಸ್ತ್, ತನಿಖೆಯಲ್ಲಿಯೇ ಹೈರಾಣಾಗುತ್ತಿದ್ದಾರೆ.

ಎನ್. ಶಶಿಕುಮಾರ್ ಅವರು ಹುಬ್ಬಳ್ಳಿ ಧಾರವಾಡ ಮಹಾನಗರದ ಪೊಲೀಸ್ ಕಮಿಷನರ್ ಆಗಿ ಬಂದ ನಂತರ ಅಪರಾಧ ಕೃತ್ಯ ಎಸಗುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು.

ಬಾಲಕಿಯನ್ನು ಅತ್ಯಾಚಾರ ಎಸಗಿದ ಆರೋಪಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದು, ಕೊಲೆ ಪ್ರಕರಣದ ಆರೋಪಿಗಳ ಕಾಲಿಗೆ ಗುಂಟೇಟು ಹಾಕಿದ್ದು, ಚಾಕು ಇರಿದ ರೌಡಿಗಳ ಕಾಲಿಗೆ ಗುಂಡು ಹೊಡೆದಿದ್ದು... ಹೀಗೆ ಪಿಸ್ತೂಲ್ ಗುಂಡಿನಿಂದಲೇ ಅಪರಾಧ ಕೃತ್ಯ ಎಸಗುವವರಲ್ಲಿ ನಡುಕ ಹುಟ್ಟಿಸಿದ್ದರು. ಆದರೆ, ಅಪರಾಧ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ.

ಕಳೆದ ಒಂದೂವರೆ ವರ್ಷದಲ್ಲಿ ಪೊಲೀಸರು ಏಳು–ಎಂಟು ಬಾರಿ ದಾಳಿ ನಡೆಸಿ ಮಾದಕ ವಸ್ತು ಬಳಕೆ ಹಾಗೂ ಮಾರಾಟ ಮಾಡುತ್ತಿದ್ದ 3,800ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆ ಮಾಡಿಸಿದ್ದರು. ಅವರಲ್ಲಿ 1,419 ಮಂದಿ ಮಾದಕ ವಸ್ತು ಸೇವನೆ ಮಾಡಿದ್ದು ದೃಢಪಟ್ಟಿದ್ದು, 282 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಆದರೂ ಅವುಗಳ ಬಳಕೆ ಹಾಗೂ ಮಾರಾಟ ಅವ್ಯಾಹತವಾಗಿ ನಡೆಯುತ್ತಿವೆ. ಪ್ರಕರಣಗಳು ದಾಖಲಾಗುತ್ತಿವೆ.

ಪೊಲೀಸರು ರೌಡಿ ಪರೇಡ್ ಆಗಾಗ ನಡೆಸಿ, ಎಚ್ಚರಿಕೆ ನೀಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮುಚ್ಚಳಿಕೆ ಪತ್ರ ಬರೆಸಿ ಕೊಂಡಿದ್ದಾರೆ. ಅಪಾಯಕಾರಿ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಹಾಗೂ ಗಡಿಪಾರು ಮಾಡಿದ್ದಾರೆ. ಈಗಾಗಲೇ 132 ರೌಡಿಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಗಡಿಪಾರು ಮಾಡಿದ್ದಾರೆ. ಆದರೂ, ಚಾಕು ಇರಿತ, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ತಲ್ವಾರ್ನಿಂದ ಹಲ್ಲೆಯಂತಹ ಪ್ರಕರಣ ನಡೆಯುತ್ತಿವೆ.

ಅಪರಾಧ ಕೃತ್ಯ ನಿಯಂತ್ರಣಕ್ಕೆ ಬೀಟ್ ಪೊಲೀಸ್ ಹೆಚ್ಚಳ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಪೊಲೀಸ್ ಇಲಾಖೆ ಜೊತೆ ಚರ್ಚಿಸಲಾಗುವುದು
ದಿವ್ಯಪ್ರಭು, ಜಿಲ್ಲಾಧಿಕಾರಿ

ಸಂಭವನೀಯ ಅಪರಾಧ ಕೃತ್ಯ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರಕರಣ ದಾಖಲಾಗುತ್ತಿದ್ದಂತೆ ತುರ್ತು ಕ್ರಮ ಕೈಗೊಳ್ಳುತ್ತಿದ್ದೇವೆ
ಮಹಾನಿಂಗ ನಂದಗಾವಿ, ಡಿಸಿಪಿ ಹುಧಾ ಮಹಾನಗರ ಪೊಲೀಸ್

ಒಂಟಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಕ್ಕಳ ಅಪಹರಣ ಕೊಲೆ ಪ್ರಕರಣ ಸೇರಿ ಹಲವು ಅಪರಾಧ ಪ್ರಕರಣಗಳು ನಡೆದಿವೆ. ಇದಕ್ಕೆಲ್ಲ ಪೂರ್ಣಪ್ರಮಾಣದಲ್ಲಿ ಕಡಿವಾಣ ಹಾಕಬೇಕಿದೆ.
ಲಿಂಗರಾಜ ಧಾರವಾಡಶೆಟ್ಟರ್, ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.