ಹುಬ್ಬಳ್ಳಿ: ಹಮಾಲಿ ದರ ಪರಿಷ್ಕರಣೆಗೆ ಒತ್ತಾಯಿಸಿ ಇಲ್ಲಿನ ಅಮರಗೋಳದ ಎಪಿಎಂಸಿ ಆವರಣದಲ್ಲಿ ಈರುಳ್ಳಿ ವಿಭಾಗದ ಹಮಾಲರು ನಡೆಸುತ್ತಿರುವ ಪ್ರತಿಭಟನೆಯು ಗುರುವಾರವೂ ಮುಂದುವರೆಯಿತು.
ನಿಯಮದನ್ವಯ ಕೂಲಿ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿ ಸೆ.2ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ಎಪಿಎಂಸಿ ಕಾರ್ಯದರ್ಶಿ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಮಾಲೀಕರ ಸಂಘದ ಮುಖಂಡರೊಂದಿಗೆ ಚರ್ಚಿಸಿ ಸೆ.11ರಂದು ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಕೂಲಿ ಪರಿಷ್ಕರಣೆ ಮಾಡದಿರುವುದನ್ನು ಖಂಡಿಸಿ, ಹಮಾಲಿ ಕಾರ್ಮಿಕರು ಮತ್ತೆ ಮುಷ್ಕರ ಮುಂದುವರೆಸಿದ್ದಾರೆ.
ಕೂಡಲೇ ನಿಯಮದಂತೆ ಹಮಾಲಿ ದರ ಪರಿಷ್ಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.