‘ಉದ್ಯಮ ಮೇಲ್ವರ್ಗದವರ ಕೈಯಲ್ಲಿ’
‘ಚಪ್ಪಲಿ ಪ್ಲಾಸ್ಟಿಕ್ ಫೈಬರ್ ದಲಿತ ಸಮುದಾಯದವರದ್ದು ಎನಿಸಿಕೊಂಡಿದ್ದ ಚರ್ಮದ ಉದ್ಯಮ– ಎಲ್ಲವೂ ಈಗ ಮೇಲ್ವರ್ಗದವರ ಕೈ ಸೇರಿದೆ. ನಮ್ಮ ಕುಲಕಸುಬನ್ನು ಕಸಿದಿದ್ದಾರೆ. ಸರ್ಕಾರ ಅವರಿಗೆ ಕಾರ್ಖಾನೆ ಸ್ಥಾಪಿಸಲು ಪರವಾನಗಿ ನೀಡಿ ನಮಗೆ ಅನ್ಯಾಯ ಮಾಡಿದೆ’ ಎಂದು ದಲಿತ ಕಾರ್ಮಿಕರ ಅಸಂಘಟಿತ ಒಕ್ಕೂಟದ ಅಧ್ಯಕ್ಷ ವಿಜಯ ಕರ‍್ರಾ ಹೇಳಿದರು. ‘ಈ ಹಿಂದೆ ಸತ್ತ ದನಗಳ ಚರ್ಮ ಬಳಸಿಕೊಂಡು ಕೆಲಸ ಮಾಡುತ್ತಿದ್ದೆವು. ಈಗ ಹಾಗಿಲ್ಲ. ವಯಸ್ಸಾಗುತ್ತಿದ್ದಂತೆ ದನಗಳನ್ನು ಮಾರಾಟ ಮಾಡುತ್ತಾರೆ. ಅವು ಕಸಾಯಿಖಾನೆಗೆ ಹೋಗಿ ಅಲ್ಲಿಂದ ಚರ್ಮ ಸಂಸ್ಕರಣೆ ಆಗಿ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ ಹೋಗುತ್ತದೆ. ವಿದೇಶಗಳಿಗೆ ರಫ್ತಾಗುತ್ತವೆ. ಮೊದಲಿನಂತೆ ಚರ್ಮವೂ ಸಿಗದೆ ನಾವು ಅಸಹಾಯಕರಾಗಿದ್ದೇವೆ’ ಎಂದು ಅವರು ತಿಳಿಸಿದರು.