ಹುಬ್ಬಳ್ಳಿ: ಉತ್ತರ ಭಾರತದ ಸಾಂಪ್ರದಾಯಿಕ ನೃತ್ಯಗಳಾದ ದಾಂಡಿಯಾ ಮತ್ತು ಗಾರ್ಭಾ ಈಗ ಭಾರತದಾದ್ಯಂತ ಪ್ರಸಿದ್ಧಗೊಂಡಿವೆ. ನವರಾತ್ರಿ ಸಂರ್ದರ್ಭದಲ್ಲಿ ಗುಜರಾತ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಂಭ್ರಮದಿಂದ ಆಚರಿಸುವ ಹಬ್ಬಕ್ಕೆ ಈ ನೃತ್ಯಗಳೇ ಈಗ ಸೊಬಗು.

ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ಈ ನೃತ್ಯಗಳು ಈಗ ಅವಳಿ ನಗರ ಹುಬ್ಬಳ್ಳಿ–ಧಾರವಾಡದಲ್ಲಿ ಸಾಮಾನ್ಯವಾಗಿವೆ. ಮಂಜುನಾಥನಗರದ ಹತ್ತಿರದ ಶಕ್ತಿ ನಗರದ ಶಕ್ತಿದೇವಸ್ಥಾನದಲ್ಲಿ ಸೆ.27 ರಂದು ಭಕ್ತಿಭಾವ ಹಾಗೂ ಸಂಸ್ಕೃತಿಯ ಸಮ್ಮಿಲನ ಅಡಿಯಲ್ಲಿ ನಡೆದ ದಾಂಡಿಯಾ ಉತ್ಸವ ದಾಖಲೆಯನ್ನೇ ಬರೆದಿದೆ.

ಉಣಕಲ್ ಸಮೀಪದ ಲಿಂಗರಾಜ ನಗರ, ವಿದ್ಯಾನಗರದ ಮರಾಠ ಮಂಗಲ ಭವನ ಸೇರಿದಂತೆ ವಿವಿಧ ಸ್ಟಾರ್ ಹೊಟೇಲ್ಗಳು ಸೇರಿದಂತೆ ನವರಾತ್ರಿ ಅಂಗವಾಗಿ ನಡೆದ ದಾಂಡಿಯಾ ನೃತ್ಯ ಮಹೋತ್ಸವ ಜನಮನವನ್ನೇ ಸಳೆದಿವೆ. ನೆಹರೂ ಮೈದಾನದಲ್ಲಿ ಸಾರ್ವಜನಿಕ ನವರಾತ್ರಿ ಉತ್ಸವ ಸಮಿತಿ, ಮೂರು ಸಾವಿರಮಠದ ಮೈದಾನದಲ್ಲಿ ನಡೆದ ದಾಂಡಿಯಾದಲ್ಲಿ ಸಾವಿರಾರು ಯುವ ಜನರು ಪಾಲ್ಗೊಂಡು ಹಬ್ಬದ ಕಳೆಯನ್ನು ಹೆಚ್ಚಿಸುವಂತೆ ಮಾಡಿದ್ದಾರೆ.

ಮಹಿಳೆಯರು, ಮಕ್ಕಳು, ಯುವ ಜನರು ಅಲ್ಲದೇ ಉತ್ಸಾಹಿ ಹಿರಿಯರು ದಾಂಡಿಯಾದಲ್ಲಿ ಪಾಲ್ಗೊಂಡು ಮೇಲ್ಪಂಕ್ತಿಯನ್ನು ಹಾಕಿದರು. ಮರಾಠ ಸಮುದಾಯ, ರಜಪೂತ ಸಮಾಜ, ಕ್ಷತ್ರಿಯ ಸಮಾಜ, ಭಾವಸಾರ ಸಮಾಜದ ಸಮಿತಿಗಳಿಂದ ನಗರದ 10ಕ್ಕೂ ಹೆಚ್ಚು ಕಡೆ ದಾಂಡಿಯಾ ನೃತ್ಯ ಮಹೋತ್ಸವಗಳನ್ನು ಹಮ್ಮಿಕೊಳ್ಳಲಾಗಿತ್ತು.

ದಾಂಡಿಯಾ ನೃತ್ಯ ಸೇರಿದಂತೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯ ಸಂಕೇತ. ಇದು ಶಾಂತಿ ಸೌಹಾರ್ದ ಉಳಿಯಲು ಸಹಾಯ ಮಾಡುತ್ತದೆ
ಅವಿನಾಶ ,ದಸರಾ ಉತ್ಸವ ಸಮಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.