ಹುಬ್ಬಳ್ಳಿ: ನಗರದ ದಾಜಿಬಾನಪೇಟೆಯ ಎಸ್ಎಸ್ಕೆ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ ನೇತೃತ್ವದಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗಾಗಿ ಆಮ್ಲಜನಕ ಹಾಗೂ ಕಾನ್ಸನ್ಟ್ರೇಟರ್ ಅನ್ನು ಉಚಿತವಾಗಿ ಒದಗಿಸುವ ಸೇವೆಗೆ, ದೇವಸ್ಥಾನದ ಮುಂಭಾಗಸಮಿತಿಯ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ ಮಂಗಳವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘20 ಆಮ್ಲಜನಕ ಕಾನ್ಸನ್ಟ್ರೇಟರ್, 30 ಕೆ.ಜಿ.ಯ 20 ಹಾಗೂ 10 ಕೆ.ಜಿ.ಯ 15 ಆಮ್ಲಜನಕ ಸಿಲಿಂಡರ್ಗಳನ್ನು ಸಮಾಜದ ದಾನಿಯಾದ ವರ್ಲ್ಡ್ ಸ್ಕ್ವೇರ್ ಸಂಸ್ಥೆಯ ಮಾಲೀಕ ಯೋಗೇಶ ಅಶೋಕ ಹಬೀಬ ಮತ್ತು ಪಾಲುದಾರರು ಒದಗಿದ್ದಾರೆ. ಅವರ ಈ ಕೆಲಸ ಅಭಿನಂದನಾರ್ಹ’ ಎಂದರು.

‘ಮನೆ ಬಾಗಿಲಿಗೆ ಉಚಿತವಾಗಿ ಆಮ್ಲಜನಕ ಸೇವೆ ಸಿಗಲಿದ್ದು, ಕೋವಿಡ್ನಿಂದ ಬಳಲುತ್ತಿರುವವರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಸಮಾಜದ ಪರವಾಗಿ ವರ್ಲ್ಡ್ ಸ್ಕೇರ್ ಸಹಯೋಗದಲ್ಲಿ ಮುಂದೆ ಐಸೊಲೇಷನ್ ಕೇಂದ್ರಗಳನ್ನು ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಕೆ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಅಶೋಕ ಕಾಟವೆ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ರಾಜು ಜರತಾರಘರ, ಎಸ್.ಎಸ್.ಕೆ ಬ್ಯಾಂಕಿನ ಮುಖ್ಯಸ್ಥ ವಿಠ್ಠಲ ಲದ್ವಾ, ಮಾಜಿ ಮೇಯರ್ ಡಿ.ಕೆ. ಚವ್ಹಾಣ, ಕೇಂದ್ರ ಪಂಚ ಸಮಿತಿಯ ಉಪ ಮುಖ್ಯ ಧರ್ಮದರ್ಶಿ ಹನುಮಂತಸಾ ನಿರಂಜನ, ಟ್ರಸ್ಟಿಗಳಾದ ಭಾಸ್ಕರ ಎನ್. ಜಿತೂರಿ, ಶ್ರೀಕಾಂತ ಹಬೀಬ, ರಾಜು ದರ್ಮದಾಸ, ಮುಖಂಡರಾದ ಲಕ್ಷ್ಮಣ ದಲಬಂಜನ, ಕಾಶಿನಾಥ ಖೋಡೆ, ವಿ.ವಿ. ಇರಕಲ, ಪ್ರಕಾಶ ಬುರುಬುರೆ, ಮಿಥುನ ಚವ್ಹಾಣ, ವಿಜಯ ಮೆಹರವಾಡೆ, ಜೆ.ವಿ. ಇರಕಲ್, ಪ್ರವೀಣ ಹಬಿಬ, ಪರಶುರಾಮ ದೊಂಗಡಿ ಇದ್ದರು.

ಆಮ್ಲಜನಕ ಸೇವೆಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 96204 74769

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.