ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಸ್ವಾತಂತ್ರ್ಯೋತ್ಸವದ ‘ಅಮೃತ’ ಸಂಭ್ರಮ

Last Updated 15 ಆಗಸ್ಟ್ 2021, 16:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ವಿವಿಧೆಡೆ ಭಾನುವಾರ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

ರೌಂಡ್‌ ಟೇಬಲ್‌: ಹುಬ್ಬಳ್ಳಿ ನೈಟ್ಸ್ ರೌಂಡ್ ಟೇಬಲ್ 178 ಮತ್ತು ಲೇಡೀಸ್ ಸರ್ಕಲ್ 143 ಜೆಕೆ ಸ್ಕೂಲ್ ಬಳಿಯ ಮನೋವಿಕಾಸ್ ಇನ್‌ಸ್ಟಿಟ್ಯೂಟ್‌ ಆಫ್ ರಿಹಾಬಿಲಿಟೇಶನ್ ಸರ್ವಿಸಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಸ್ತುವಾರಿ ಹಿರೇಮಠ, ಕ್ಲಬ್ ಅಧ್ಯಕ್ಷ ಕುನಾಲ್ ಪವಾರ್, ಕಾರ್ಯದರ್ಶಿ ಮನೋಜ್ ಬನ್ಸಾಲಿ, ಲೇಡೀಸ್ ಸರ್ಕಲ್ ಅಧ್ಯಕ್ಷ ಪನ್ನಾ ಪವಾರ್, ಕಾರ್ಯದರ್ಶಿ ಕಿರಣ್ ಇದ್ದರು.

ನಿವಾಸಿಗಳ ಸಂಘ: ಗುರುನಾಥ ನಗರ ನಿವಾಸಿಗಳ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನಿರ್ಮಲಾ ಹಿರೇಮಠ, ರೇಣುಕಾ ಕಾಪರೆ, ದಾವಲಸಾಬ ಬೆಳ್ಳಿಹಾಳ, ಮುರಗೋಡ ಸರ್, ಸುನಿತಾ ಪ್ರಸಾದ, ಕಸ್ತೂರಿ ಮುರಗೋಡ, ಮುಂಡಾಸ ಸರ್, ಹರ್ಷಾ ಮ್ಯಾಗೇರಿ ಇದ್ದರು.

ಶಾಲೆ: ಶಾಸಕ ಪ್ರಸಾದ ಅಬ್ಬಯ್ಯ ಅವರು ಘಂಟಿಕೇರಿಯ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯಶಿಕ್ಷಕಿ ತೇಜಸ್ವಿನಿ ರೇವಡಿಗಾರ, ಶಿಕ್ಷಕರಾದ ರೇಣುಕಾ ಅಸುಂಡಿ, ಸಿ.ಎಸ್. ಪೂಜಾರ, ಪಿ.ಎಚ್. ನದಾಫ್, ಮಂಜುಳಾ ಚೋಳಿನ, ವನಿತಾ,ಕೊಳಮಲಿ, ತಿರ್ಲಾಪುರ, ಬಾಗುನ್ನವರ, ಸವಿತಾ ದತ್ತವಾಡ ಇದ್ದರು.

ವಾಣಿಜ್ಯ ಮಹಾವಿದ್ಯಾಲಯ: ಕೆ.ಎಲ್.ಇ.ಶಿಕ್ಷಣ ಸಂಸ್ಥೆಯ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿಠ್ಠಲ ಭಟ್ ಧ್ವಜಾರೋಹಣ ಮಾಡಿದರು. ವಿದ್ಯಾರ್ಥಿಗಳಾದ ಸ್ವರ್ಣಾ, ನೇತ್ರಾವತಿ, ನೇಹಲ್, ಭಾಗ್ಯಶ್ರೀ, ವರ್ಷಣಿ, ಅಮೂಲ್ಯ, ಅಮೋದಿನಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ಪ್ರೊ. ರಶ್ಮಿ ಪಿ., ನಿಧಿ, ಸ್ವಾತಿ ಪಾಲ್ಗೊಂಡಿದ್ದರು.

ಭಾವದೀಪ ಸಂಸ್ಥೆ: ಭಾವದೀಪ ಶಿಕ್ಷಣ ಸಂಸ್ಥೆಯ ವಿಮಲಾ ಕುಲಕರ್ಣಿ ಮೆಮೋರಿಯಲ್ ಶಾಲೆಯಲ್ಲಿ ಆಡಳಿತ ಮಂಡಳಿಯ ಸದಸ್ಯ ಶ್ರೀರಂಗ ಹನುಮಸಾಗರ ಧ್ವಜಾರೋಹಣ ಮಾಡಿದರು. ಪ್ರಾಚಾರ್ಯೆ ಶ್ರೀದೇವಿ ಮಳಗಿ, ವ್ಯವಸ್ಥಾಪಕಿ ಸಚೇತಾ. ಬಿ. ರಾವ್, ಅನಿತಾ ಬಾಗಲಕೋಟೆ, ಅಂಜನಾ ಕುರುಡೇಕರ್, ವಿಜಯಶ್ರೀ, ಸ್ವಾತಿ, ಪ್ರತಿಭಾ ಚೋಪ್ರಾ ಇದ್ದರು.

ಕೊಂಕಣ ಸಮುದಾಯ: ಕೊಂಕಣ ಮರಾಠ ಸಮುದಾಯ ಭವನದಲ್ಲಿ ಅಧ್ಯಕ್ಷ ಅಶೋಕ ರಾಣೆ, ಬಿಜೆಪಿ ಮುಖಂಡ ರವಿ ನಾಯ್ಕ, ಮಹಾದೇವ ನಾಯ್ಕ, ಎಸ್.ಪಿ ದೇಸಾಯಿ, ಎಸ್.ಪಿ. ನಾಯ್ಕ, ಆರ್. ವೈ. ನಾಯ್ಕ, ಕಾರ್ಯದರ್ಶಿ ಪ್ರಕಾಶ ನಾಯ್ಕ, ಅಶೋಕ ನಾಯ್ಕ, ಖಜಾಂಚಿ ಸಂಜೀವ ನಾಯ್ಕ, ವಿನಾಯಕ ಗಾಂವಕರ, ಸುರೇಶ ಗಾಂವಕರ, ನಿರ್ಮಲಾ ರಾಣೆ, ಜಗದೀಶ ರಾಣೆ, ರಾಜಶೇಖರ ನಾಯ್ಕ, ಪ್ರೇಮಾನಂದ ನಾಯ್ಕ ಭಾಗವಹಿಸಿದ್ದರು.

ಜೆ.ಕೆ. ಇಂಗ್ಲಿಷ್‌ ಶಾಲೆ: ಜೆ.ಕೆ. ಎಜುಕೇಷನ್‌ ಸೊಸೈಟಿಯ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ನಿವೃತ್ತ ಸಂಗೀತ ಶಿಕ್ಷಕ ಅರುಣ ದೇಸಾಯಿ ಧ್ವಜಾರೋಹಣ ಮಾಡಿದರು. ಸೊಸೈಟಿಯ ಜಗದೀಶ ಕಲ್ಯಾಣ ಶೆಟ್ಟರ್‌ ಇದ್ದರು.

ಕುಸುಗಲ್‌ ಶಾಲೆ: ಕುಸುಗಲ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಸದಸ್ಯ ಬಿ.ವಿ.ಕೆಂಚನಗೌಡ್ರ ಧ್ವಜಾರೋಹಣ ಮಾಡಿದರು. ಮುಖ್ಯ ಶಿಕ್ಷಕ ಪಿ.ಆರ್.ಮ್ಯಾಗೇರಿ, ಶ್ರೀಕಾಂತ ಪತ್ತಾರ, ರೇಣುಕಾ ತಂಬೂರಿ, ಈಶ್ವರ ನೂಲ್ವಿ, ರೇಣುಕಾ ನೆಲಗುಡ್ಡದ, ಮೀನಾಕ್ಷಿ ಚಂದರಗಿ, ಪಿ.ಡಿ.ಪಾಟೀಲ, ದಾಕ್ಷಾಯಣಿ ನಾಗಪ್ಪಗೋಳ, ನಿವೇದಿತಾ ಗಾಂವಕಾರ, ಅಮೀರಾಬಾನು ದಲಾಲ ಪಾಲ್ಗೊಂಡಿದ್ದರು.

ಆದರ್ಶ ಮಹಾವಿದ್ಯಾಲಯ: ಸಂಸ್ಥೆಯ ನಿರ್ದೇಶಕ ಪ್ರೊ. ಎಸ್‌.ಬಿ. ಕನ್ನೂರ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ಎಂ.ಕೆ. ಬೆಳಗಲಿ, ನಿರ್ದೇಶಕರಾದ ಪ್ರೊ. ಬಿ.ಸಿ. ಗೌಡರ, ಡ್ಯಾನಿಯಲ್‌ ಹೊಸಕೇರಿ, ಬಿ.ಜಿ ಅಣ್ಣಿಗೇರಿ ಇದ್ದರು.

ಮಹೇಶ ಕಾಲೇಜು: ಅಕ್ಷಯ ಪಾರ್ಕ್‌ನಲ್ಲಿರುವ ಡಾ.ಆರ್.ಬಿ.ಪಾಟೀಲ ಮಹೇಶ ಪಿ.ಯು. ಕಾಲೇಜಿನಲ್ಲಿ ಪ್ರಾಚಾರ್ಯ ರಾಮ್‍ಮೋಹನ್ ಎಚ್.ಕೆ., ಉಪಪ್ರಾಚಾರ್ಯ ರಮೇಶ ಹೊಂಬಾಳೆ, ಪ್ರೊ. ಐ.ಎಸ್. ಹಿರೇಮಠ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಮತ್ತು ಭಾಷಣ ಚಟುವಟಿಕೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT