ಐಆರ್‌ಸಿಟಿಸಿಯಿಂದ ಪ್ರವಾಸದ ಪ್ಯಾಕೇಜ್‌

7

ಐಆರ್‌ಸಿಟಿಸಿಯಿಂದ ಪ್ರವಾಸದ ಪ್ಯಾಕೇಜ್‌

Published:
Updated:

ಹುಬ್ಬಳ್ಳಿ: ರೈಲ್ವೆ ಸಚಿವಾಲಯದ ಅಡಿ ಕಾರ್ಯ ನಿರ್ವಹಿಸುತ್ತಿರುವ ಐಆರ್‌ಸಿಟಿಸಿ, ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಆಯೋಜಿಸಿದೆ.

ಮಾ. 21ರಿಂದ 27ರ ವರೆಗೆ ವಿಮಾನದಲ್ಲಿ ಬೆಂಗಳೂರಿನಿಂದ ಶ್ರೀಲಂಕಾ ರಾಮಾಯಾಣ ಯಾತ್ರೆ ಆಯೋಜಿಸಿದ್ದು, ಕ್ಯಾಂಡಿ, ಕೊಲಂಬೊ ಮತ್ತು ನಿವಾರಾ ಎಲಿಯಾಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಇದಕ್ಕೆ ಒಬ್ಬರಿಗೆ ಒಟ್ಟು ₹ 42,250 ನಿಗದಿ ಮಾಡಲಾಗಿದೆ.

ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಆರ್‌ಸಿಟಿಸಿ ಅಧಿಕಾರಿ ಮಂಜುನಾಥ್‌ ‘ಮಾ. 28ರಿಂದ ಐದು ದಿನದ ಅವಧಿಗೆ ಕಠ್ಮಂಡು ಹಾಗೂ ಪೋಖ್ರಾ ಪ್ರವಾಸಕ್ಕೆ ₹ 37,300 ನಿಗದಿ ಮಾಡಲಾಗಿದೆ. ಮಾ. 13ರಿಂದ ಐದು ದಿನ ಹಮ್ಮಿಕೊಂಡಿರುವ ಪಂಢರಪುರ, ಶಿರಡಿ ಹಾಗೂ ಮಂತ್ರಾಲಯಕ್ಕೆ ₹ 5,670 ಹಣ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

ಐಆರ್‌ಸಿಟಿಸಿ ಪ್ರವಾಸೋದ್ಯಮ ವ್ಯವಸ್ಥಾಪಕ ಕಿಶೋರ್ ಸತ್ಯ ಮಾತನಾಡಿ ‘ಭಾರತದಲ್ಲಿನ ಪ್ರಯಾಣಕ್ಕೆ ಸ್ಲೀಪರ್‌ ಕ್ಲಾಸ್‌ನಲ್ಲಿ ರೈಲಿನಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ಊಟ ಮತ್ತು ವ್ಯವಸ್ಥೆ ಸೌಲಭ್ಯವಿರುತ್ತದೆ.  ಏಪ್ರಿಲ್‌ನಿಂದ ಹುಬ್ಬಳ್ಳಿಯಿಂದ ತಿರುಪತಿಗೆ ಪ್ಯಾಕೇಜ್‌ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

ಆಸಕ್ತರು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ದೂ. 9741421088 ಸಂಪರ್ಕಿಸುವಂತೆ ಅವರು ಕೋರಿದರು. ಐಆರ್‌ಸಿಟಿಸಿ ಹುಬ್ಬಳ್ಳಿ ವಲಯ ಮ್ಯಾನೇಜರ್‌ ನವೀನ್‌ ವರ್ಮಾ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !