ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಯಜ್ಞ ಸಪ್ತಾಹಕ್ಕೆ ಚಾಲನೆ

ಭಾವೂಸಾಹೇಬ ಮಹಾರಾಜರ ಬ್ರಹ್ಮಶಾಲೆ
Last Updated 10 ಏಪ್ರಿಲ್ 2022, 8:11 IST
ಅಕ್ಷರ ಗಾತ್ರ

ಅಣ್ಣಿಗೇರಿ: ಇಂಚಗೇರಿ ಆಧ್ಯಾತ್ಮ ಸಂಪ್ರದಾಯದ ಸದ್ಗುರುಗಳಾದ ಸ.ಸ. ಭಾವೂಸಾಹೇಬ ಮಹಾರಾಜರ ಜ್ಞಾನಯಜ್ಞ ಸಪ್ತಾಹ ಶುಕ್ರವಾರ ಆರಂಭವಾಯಿತು. ಡಾ. ಎ.ಸಿ. ವಾಲಿ ಮಹಾರಾಜರು ವೀಣೆ ಪೂಜೆ ಮಾಡುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಇಂಚಗೇರಿ ಆಧ್ಯಾತ್ಮ ಸಾಂಪ್ರದಾಯವು ಜಗತ್ತಿನ ಶ್ರೇಷ್ಠ ಸಾಂಪ್ರದಾಯದಲ್ಲಿ ಒಂದಾಗಿದ್ದು, ಜಾತಿ-ಮತ-ಪಂಥ ಮೀರಿದ ಸರ್ವ ಶ್ರೇಷ್ಠ ಸಮಾನತೆಯ ಸಂಪ್ರದಾಯವಾಗಿದೆ. ಬಸವಾದಿ ಶಿವಶರಣರ ತತ್ವ ಸಿದ್ಧಾಂತಗಳನ್ನು ಆಚರಣೆಗೆ ತಂದಿದೆ. ಇಂಚಗೇರಿ ಆಧ್ಯಾತ್ಮ ಸಾಂಪ್ರದಾಯದ ಮೂಲ ಪುರುಷ ಜಗದ್ಗುರು ರೇವಣಸಿದ್ಧರಾಗಿದ್ದಾರೆ. ಸಿದ್ಧಗಿರಿಯ ಕಾಡಸಿದ್ಧರು, ಗುರುಲಿಂಗಜಂಗಮ ಮಹಾರಾಜರು, ಭಾವೂಸಾಹೇಬ ಮಹಾರಾಜರಿಂದ ಗುರು ಪರಂಪರೆ ಬೆಳೆದು ಬಂದಿದೆ ಎಂದರು.

ದೇಶದಾದ್ಯಂತ 1,700 ಮಠಗಳನ್ನು ಹೊಂದಿದೆ. ಜಾತಿ ಜಂಜಡ ದೂರ ತಳ್ಳಿ ಗುರುವಿನ ತತ್ವಸಿದ್ಧಾಂತವನ್ನು ಪಾಲಿಸುತ್ತಾ ಬಂದ ಶ್ರೇಷ್ಠ ಪರಂಪರೆ ಇದಾಗಿದೆ ಎಂದರು.

ಚಂಬಣ್ಣ ಸುರಕೋಡ, ಈಶ್ವರಪ್ಪನವರು ಉಳ್ಳಾಗಡ್ಡಿ, ಮಂಜುಳಾ ಹೂಗಾರ ಮಾತನಾಡಿದರು. ದಾಸಬೋಧ ಪಠಣವನ್ನು ಕೃಷ್ಣ ಜಿಂಗಾಡೆ ನಡೆಸಿಕೊಟ್ಟರು. ಶರಣಬಸಪ್ಪ ದೇಶಮುಖ, ಸುಭಾಷ ವಿಠೋಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT