ಕಲಘಟಗಿ: ತಾಲ್ಲೂಕಿನ ಆಸ್ತಕಟ್ಟಿ ತಾಂಡಾದಲ್ಲಿ ಸಾಲಬಾಧೆಯಿಂದ ಮನನೊಂದು ರೈತ ಹನುಮಂತಪ್ಪ ರೇಖಪ್ಪ ಲಮಾಣಿ (48) ಬುಧವಾರ ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ.

3 ಎಕರೆ ಜಮೀನಿನ ಮೇಲೆ ತನ್ನ ತಂದೆಯ ಹೆಸರಿನಲ್ಲಿ ತಾಲ್ಲೂಕಿನ ತಬಕದಹೊನ್ನಳ್ಳಿಯ ಕೆವಿಜಿ ಬ್ಯಾಂಕ್, ಕಲಘಟಗಿಯ ಪಿಎಲ್ಡಿ ಬ್ಯಾಂಕ್ನಲ್ಲಿ ಬೆಳೆ ಸಾಲ ಹಾಗೂ ಧರ್ಮಸ್ಥಳ ಸಂಘದಲ್ಲಿ ಪತ್ನಿಯ ಹೆಸರಿನಲ್ಲಿ ₹ 40 ಸಾವಿರ ಸಾಲ ಹಾಗೂ ವಿವಿಧ ಕಡೆ ₹3 ಲಕ್ಷ ಸೇರಿದಂತೆ ಸುಮಾರು ₹8.40 ಲಕ್ಷ ಸಾಲ ಮಾಡಿದ್ದರು.

ಸಾಲ ತೀರಿಸಲಾಗದೆ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಪತ್ನಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.