ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ವಿವಿಧೆಡೆ ಕನಕದಾಸ ಜಯಂತಿ ಆಚರಣೆ; ಚಿತ್ರಕ್ಕೆ ಗಣ್ಯರ ಪುಷ್ಪನಮನ

ವಿವಿಧೆಡೆ ಕನಕದಾಸ ಜಯಂತಿ ಆಚರಣೆ; ಚಿತ್ರಕ್ಕೆ ಗಣ್ಯರ ಪುಷ್ಪನಮನ
Last Updated 22 ನವೆಂಬರ್ 2021, 16:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ನಗರದ ವಿವಿಧೆಡೆ ಸೋಮವಾರ ಆಚರಿಸಲಾಯಿತು. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸರಳ ಆಚರಣೆಗೆ ಒತ್ತು ನೀಡಲಾಯಿತು. ಗಣ್ಯರು ಕನಕದಾಸರ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ವ್ಯಕ್ತಿತ್ವ ಹಾಗೂ ವಿಚಾರಧಾರೆಯನ್ನು ಸ್ಮರಿಸಿದರು.

ಜೆಎಸ್‌ಎಸ್‌ ಸಕ್ರಿ ಕಾನೂನು ಕಾಲೇಜು:

‘ತಮ್ಮ ಕೀರ್ತನೆಗಳ ಮೂಲಕ ಕನಕದಾಸರು ಸಮಾಜದ ಲೋಪದೋಷಗಳನ್ನು ತಿದ್ದಲು ಯತ್ನಿಸಿದರು. 800ಕ್ಕೂ ಹೆಚ್ಚು ಕೀರ್ತನೆಗಳನ್ನು ಬರೆದ ಅವರು ‘ನಳ ಚರಿತ್ರೆ’, ‘ಮೋಹನ ತರಂಗಿಣಿ’, ‘ಹರಿಭಕ್ತಿ ಸಾರ’, ‘ರಾಮಧ್ಯಾನ ಚರಿತೆ’ಯಂತಹ ಕಾವ್ಯಗಳನ್ನು ರಚಿಸಿದರು. ಅವರ ವಿಚಾರಧಾರಗಳು ಸಾರ್ವಕಾಲಿಕ’ ಎಂದು ಪ್ರೊ. ಪೂರ್ಣಿಮಾ ಕುರಡಿಕೇರಿ ಅಭಿಪ್ರಾಯಪಟ್ಟರು.ಜೆಎಸ್‌ಎಸ್‌ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರ್.ಎಸ್. ಅವಧಾನಿ ಮಾತನಾಡಿ, ‘ಕನಕದಾಸರು ಮನುಷ್ಯನ ಅಹ೦ಕಾರ, ಢಾ೦ಭಿಕತೆ ಹಾಗೂ ಭೋಗದ ಜೀವನವನ್ನು ಕಟುವಾಗಿ ಟೀಕಿಸಿದರು. ಸಮಾನತೆ ಹಾಗೂ ಸರಳ ಜೀವನದ ಸಂದೇಶಗಳನ್ನು ನೀಡಿದರು’ ಎಂದರು.

ಪ್ರಾಚಾರ್ಯೆ ಡಾ. ರೂಪಾ ಇ೦ಗಳಹಳ್ಳಿ, ಪ್ರೊ. ಬಾಬೂಲಾಲ ದರಗದ, ಪ್ರೊ. ದೀಪಾ ಪಾಟೀಲ, ಪ್ರೊ. ಶ್ರೀಶೈಲಾ ಮುಧೋಳ, ಸುರೇಶ ಮ. ಲಿ೦ಬಿಕಾಯಿ, ಶೈಲಜಾ ಹಗೇದಾಳ, ಸತೀಶ ಸಿ.ವಿ., ಜಿ.ಎಚ್. ಆಡೂರು, ಎಂ.ಜಿ. ಬಾರೂದವಾಲೆ, ಬಿ.ಕೆ. ಪಾಟೀಲ ಇದ್ದರು.

ಪಾಲಿಕೆ:

ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಆಯುಕ್ತ ಡಾ. ಸುರೇಶ ಇಟ್ನಾಳ ಅವರು ಕನಕದಾಸರ ಚಿತ್ರಕ್ಕೆ ಪೂಜೆ ನೆರವೇರಿಸಿದರು. ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅಜೀಜ್ ದೇಸಾಯಿ, ಸಂತೋಷ ಯರಂಗಳಿ, ಎಸ್‌.ಸಿ. ಬೇವೂರ ಮುಂತಾದವರು ಇದ್ದರು.

ತಾಲ್ಲೂಕು ಆಡಳಿತ:

ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತದಿಂದ ನಡೆದ ಕಾರ್ಯಕ್ರಮದಲ್ಲಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಶಾಸಕ ಜಗದೀಶ ಶೆಟ್ಟರ್ ಕನಕದಾಸ ಚಿತ್ರಕ್ಕೆ ನಮನ ಸಲ್ಲಿಸಿದರು.ತಹಶೀಲ್ದಾರರಾದ ಶಶಿಧರ್ ಮಾಡ್ಯಾಳ, ಪ್ರಕಾಶ್ ನಾಶಿ, ತಾಲ್ಲೂಕು ಪಂಚಾಯ್ತಿ ಇಒ ಗಂಗಾಗಧರ ಕಂದಕೂರ,ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಿ.ವಿ. ಕರ್ವೀರ್ ಮಠ, ತಾಲ್ಲೂಕು ವಿಸ್ತರಣಾಧಿಕಾರಿ ಸುರೇಶ್ ಗುರನ್ನವರ್ ಇದ್ದರು.

ಆಕ್ಸ್‌ಫರ್ಡ್ ಕಾಲೇಜು:

ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನಕದಾಸರ ಚಿತ್ರಕ್ಕೆಸಿಬ್ಬಂದಿ ಪುಷ್ಪನಮನ ಸಲ್ಲಿಸಿದರು.ಪದವಿ ಕಾಲೇಜಿನ ಪ್ರಾಚಾರ್ಯೆ ಡಾ. ಪ್ರೇಮಾ ಗಿರೀಮಶೆಟ್ಟಿ, ಬಿ.ಸಿ.ಎ ವಿಭಾಗದ ಮುಖ್ಯಸ್ಥ ಪ್ರೊ. ಮಂಜುನಾಥ ಮುತ್ತಲಗಿರಿ, ಪ್ರೊ. ಪೂಜಾ ಅಪ್ಪನವರ, ಪ್ರೊ. ಸೌಮ್ಯಾ ಶಾಂತಗಿರಿ ಇದ್ದರು.

ಬಿಜೆಪಿ ಕಚೇರಿ:

ದೇಶಪಾಂಡೆ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನಕದಾಸ ಚಿತ್ರಕ್ಕೆ ಪಕ್ಷದ ಮುಖಂಡರು ಪೂಜೆ ಸಲ್ಲಿಸಿದರು. ಪಕ್ಷದಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ, ಬಿಜೆಪಿ ವಕ್ತಾರರಾದ ರವಿ ನಾಯಕ, ಮುರಗೇಶ ಹೊರಡಿ, ಚಂದ್ರು ಕಿರೇಸೂರ, ಚಂದ್ರಕಾಂತ, ಶಂಕರ ಪಾಟೀಲ, ನಿಂಗರಾಜ ಮುಂದಿನಮನಿ, ಗುರು ದೊಡ್ಡಮನಿ ಇದ್ದರು.

ಪಕ್ಷದ ಪೂರ್ವ ವಿಧಾನಸಭಾ ಕ್ಷೇತ್ರದ ವತಿಯಿಂದ ಹಳೇ ಹುಬ್ಬಳ್ಳಿಯ ದುರ್ಗದಬೈಲ್‌ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಶಾಸಕ ಜಗದೀಶ ಶೆಟ್ಟರ್ ಭಾಗವಹಿಸಿದ್ದರು.

ಪಕ್ಷದ ಮುಖಂಡರಾದಪ್ರಭು ನವಲಗುಂದಮಠ, ವೀರಭದ್ರಪ್ಪ ಹಾಲಹರವಿ, ವಿಭಾಗಿಯ ಸಂಘಟಣಾ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಬಸವಾ, ರಂಗಾ ಬದ್ದಿ , ಶಿವು ಮೆಣಸಿನಕಾಯಿ, ಬಸವರಾಜ ಅಮ್ಮಿನಬಾವಿ, ಶಿವಾನಂದ ಮುತ್ತಣ್ಣವರ, ಅನೂಪ್ ಬಿಜವಾಡ, ಸಂತೋಷ ಅರಕೇರಿ, ಮಂಜುನಾಥ ಬಿಜವಾಡ, ಸುವರ್ಣ ಜಂಗಮಗೌಡರ, ಅಣ್ಣಪ್ಪ ಗೋಕಾಕ, ಗಜು ಜಡಿ, ನಾಗರಾಜ ಟಗರಗುಂಟಿ, ‌ಶಶಿಕಾಂತ ಬಿಜವಾಡ, ಶ್ರೀಧರ ಹಳ್ಳಿ, ರಂಗಾ ಕಠಾರೆ, ಉಮೇಶ್ ದೂಶಿ, ಮಂಜುನಾಥ ಕಾಟಕರ, ದೀಪಕ ಲಾಳಗೆ, ನೀಲಕಂಠ ತಡಸದಮಠ, ಪ್ರೀತಮ ಅರಕೇರಿ, ಮಲ್ಲಪ್ಪ ಶಿರಕೋಳ, ಮಾರುತಿ ಚಾಕಲಬ್ಬಿ, ರಾಜು ಕೋರಾಣ್ಯಮಠ, ಲೋಕೇಶ್ ಗುಂಜಾಳ, ಷಣ್ಮುಖಯ್ಯ ಪಂಚಾಂಗಮಠ, ಮಹೇಶ ಲಕಾಜನವರ, ಅರುಣ ಉಗರಗೋಳ, ಹನುಮಂತಪ್ಪ ದಾಲಪಟ ಹಾಗೂಲಕ್ಷ್ಮೀಕಾಂತ ಘೋಡಕೆ ಇದ್ದರು.

ತತ್ವಗಳನ್ನು ಅಳವಡಿಸಿಕೊಳ್ಳಲು ಸಲಹೆ

‘ಹರಿದಾಸ ಪರಂಪರೆಯಲ್ಲಿ ದಿಟ್ಟ ಹೆಜ್ಜೆ ಇಟ್ಟ ಕನಕದಾಸರು ತಮ್ಮ ಕೀರ್ತನೆ, ಕಾವ್ಯಗಳು ಹಾಗೂ ಬದುಕಿನ ಮೂಲಕ ಜೀವಪರ ಸಂದೇಶಗಳನ್ನು ನೀಡಿದ್ದಾರೆ. ಅವರ ತತ್ವಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಪ್ರೊ.ಕೆ.ಎಸ್. ಕೌಜಲಗಿ ಹೇಳಿದರು.

ಎಸ್‌ಜೆಎಂವಿಎಸ್‌ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯಾವುದೇ ಜಾತಿ,ಧರ್ಮ,ಪ್ರದೇಶ,ಭಾಷೆಗೆ ಸೀಮಿತವಾಗದ ಕನಕದಾಸರ ವಿಶ್ವಮಾನವ ಪರಿಕಲ್ಪನೆಯ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತತೆ ಪಡೆದಿದೆ. ಇಂದಿನ ಆಧುನಿಕ ಸಮಾಜಕ್ಕೆ ಅವರ ತತ್ವ ಮತ್ತು ಸಂದೇಶಗಳ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟರು.

ಪ್ರಾಚಾರ್ಯ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಡಾ.ಜಿ.ಎಸ್‌. ನವಲಗುಂದ, ಡಾ. ಶಿವಲೀಲಾ, ಪ್ರೊ. ಆದಪ್ಪನವರ, ವೆಂಕಟೇಶ ಮರಗುದ್ದಿ, ಕನ್ನಡಪರ ಹೋರಾಟಗಾರ ಅಮೃತ ಇಜಾರಿ, ಪ್ರೊ. ಧಾರವಾಡ ಶೆಟ್ಟರ, ಪ್ರೊ. ಶಿವಕುಮಾರ ಪ್ರಭಯ್ಯನವರಮಠ, ಅಣ್ಣಪ್ಪ ಕೊರವರ ಇದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸತತ ಮೂರನೇ ಭಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಲಿಂಗರಾಜ ಅಂಗಡಿ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT