ಜೂ. 30ರಂದು ಹೊಸ ಕಟ್ಟಡಕ್ಕೆ ಕಾರಟಗಿ ಆಸ್ಪತ್ರೆ ಸ್ಥಳಾಂತರ

ಗುರುವಾರ , ಜೂಲೈ 18, 2019
29 °C

ಜೂ. 30ರಂದು ಹೊಸ ಕಟ್ಟಡಕ್ಕೆ ಕಾರಟಗಿ ಆಸ್ಪತ್ರೆ ಸ್ಥಳಾಂತರ

Published:
Updated:

ಹುಬ್ಬಳ್ಳಿ: ಸದ್ಯ ರಾಜಧಾನಿ ಕಾಲೊನಿಯಲ್ಲಿರುವ ಕಾರಟಗಿ ಆಸ್ಪತ್ರೆಯು ಜೂ. 30ರಿಂದ ನೇತಾಜಿ ಕಾಲೊನಿಯ ಮೂರನೇ ಕ್ರಾಸ್‌ನ ಹೊಸ ಕಟ್ಟಡದಲ್ಲಿ ಕಾರ್ಯಾರಂಭ ಮಾಡಲಿದೆ.

ಆಸ್ಪತ್ರೆಯ ವೈದ್ಯ ರಾಮಚಂದ್ರ ಕಾರಟಗಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಅಂದು ಬೆಳಿಗ್ಗೆ 11 ಗಂಟೆಗೆ ಸಿದ್ಧಾರೂಢ ಮಠದ ಅಂಧ ಮಕ್ಕಳಿಂದ ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನೆ ನಡೆಯಲಿದೆ. ಸಂಗೀತ ಕಾರ್ಯಕ್ರಮ ಜರುಗಲಿವೆ’ ಎಂದರು.

‘ಒಂದು ದಶಕದಿಂದ ಬಡವರಿಗೆ, ಸೈನಿಕರಿಗೆ ಹಾಗೂ ಅವರ ಕುಟುಂಬದವರಿಗೆ, ಅನಾಥಾಶ್ರಮದ ಮಕ್ಕಳಿಗೆ ಉಚಿತ ಆರೋಗ್ಯ ಶಿಬಿರ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಹೊಸ ಆಸ್ಪತ್ರೆಯ ಬಳಿಕವೂ ಈ ಯೋಜನೆ ಮುಂದುವರಿಯಲಿದೆ. ಮುಂಬರುವ ದಿನಗಳಲ್ಲಿ ವಾರಕ್ಕೊಂದು ಬಾರಿ ಸಾರ್ವಜನಿಕರಿಗೆ ಉಚಿತ ತಪಾಸಣೆ, ತಿಂಗಳಲ್ಲಿ ಎರಡು ಉಚಿತ ಶಸ್ತ್ರಚಿಕಿತ್ಸೆ, ರಾಷ್ಟ್ರಾದ್ಯಂತ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ. ಪ್ರತಿ ಗುರುವಾರ ಸಂಜೆ ಆರು ಗಂಟೆಯಿಂದ 9ರ ತನಕ ಉಚಿತವಾಗಿ ರೋಗಿಗಳ ಪರೀಕ್ಷೆ ಮಾಡಲಾಗುವುದು. 2001ರಿಂದ 1,800 ಯೋಧರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ’ ಎಂದರು.

ವೈದ್ಯೆ ವೀಣಾ ಕಾರಟಗಿ, ಪ್ರಾರ್ಥನಾ ಸಂಸ್ಥೆಯ ಪದಾಧಿಕಾರಿ ವಿನಾಯಕ, ನೇತಾಜಿ ಕಾಲೊನಿಯ ಅಧ್ಯಕ್ಷ ಬಸವರಾಜ, ಜಿಲ್ಲಾ ಸೈಕ್ಲಿಂಗ್‌ ಸಂಸ್ಥೆ ಉಪಾಧ್ಯಕ್ಷ ದಿನೇಶ ಜೈನ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !