ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬಿವಿಪಿ ವಿರೋಧಕ್ಕೆ ಮಣಿದ ಕುಲಪತಿ: ಯುವಜನೋತ್ಸವ ಉದ್ಘಾಟಿಸಲಿದ್ದ ನಟ ಚೇತನ್ ಬದಲು

ಎಬಿವಿಪಿ ವಿರೋಧಕ್ಕೆ ಮಣಿದ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ
Published 14 ಜೂನ್ 2023, 11:35 IST
Last Updated 14 ಜೂನ್ 2023, 11:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎಬಿವಿಪಿ ವಿರೋಧಕ್ಕೆ ಮಣಿದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಬಸವರಾಜ ಅವರು, ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನೆಗೆ ಆಹ್ವಾನಿಸಿದ್ದ ಚಿತ್ರನಟ ಚೇತನ ಅಹಿಂಸಾ ಅವರನ್ನು ಬದಲಾಯಿಸಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್‌. ಪಾಟೀಲ ಅವರನ್ನು ಆಹ್ವಾನಿಸಿದ್ದಾರೆ.

ಇದೇ ತಿಂಗಳ 16, 17ರಂದು ವಿಶ್ವವಿದ್ಯಾಲಯವು ವಲಯ ಮಟ್ಟದ ಯುವಜನೋತ್ಸವವನ್ನು ಹುಬ್ಬಳ್ಳಿಯ ನವನಗರದಲ್ಲಿರುವ ತನ್ನ ಕ್ಯಾಂಪಸ್‌ನಲ್ಲಿ ಆಯೋಜಿಸಿದೆ. 16ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನೆಗೆ ಚಿತ್ರನಟ ಚೇತನ ಅವರನ್ನು ಆಹ್ವಾನಿಸಲಾಗಿತ್ತು. ಈ ವಿಷಯವನ್ನು ಕುಲಪತಿ ಪ್ರೊ.ಸಿ.ಬಸವರಾಜ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಸುದ್ದಿಗೋಷ್ಠಿ ನಡೆದ ಅರ್ಧಗಂಟೆಯಲ್ಲಿ ಕುಲಪತಿಯವರ ಕೊಠಡಿಗೆ ಬಂದ ಎಬಿವಿಪಿ ಸದಸ್ಯರು, ಚೇತನ ಅವರನ್ನು ಆಹ್ವಾನಿಸಬಾರದೆಂದು ಮನವಿ ಮಾಡಿದರು. ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಂಬಿಕೆ ಇಲ್ಲದ, ನ್ಯಾಯಾಧೀಶರ ಬಗ್ಗೆ ಟೀಕೆ ಮಾಡಿದ ಹಾಗೂ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲಿರುವ  ಅವರನ್ನು ಉದ್ಘಾಟನೆಗೆ ಆಹ್ವಾನಿಸಿರುವುದು ಖಂಡನೀಯ. ಕೂಡಲೇ ಅವರನ್ನು ಬದಲಾಯಿಸದಿದ್ದರೆ ಕಾರ್ಯಕ್ರಮದ ವೇಳೆ ಪ್ರತಿಭಟನೆ ನಡೆಸುತ್ತೇವೆ ಎಂದು  ಎಚ್ಚರಿಕೆ ನೀಡಿದರು.

‘ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವವರನ್ನು ಕಾನೂನು ವಿಶ್ವವಿದ್ಯಾಲಯವೇ ತನ್ನ ಕಾರ್ಯಕ್ರಮಕ್ಕಾಗಿ ಆಹ್ವಾನಿಸುತ್ತಿರುವುದು ಸರಿಯಲ್ಲ. ಅವರನ್ನು ಬದಲಾಯಿಸದಿದ್ದರೆ ಕಾರ್ಯಕ್ರಮದ ವೇಳೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಬಿವಿಪಿ ರಾಜ್ಯ ಘಟಕದ ಕಾರ್ಯದರ್ಶಿ ಮಣಿಕಂಠ ಕಳಸ ಹೇಳಿದರು.

ಮನವಿ ಸ್ವೀಕರಿಸಿದ ಪ್ರೊ. ಸಿ.ಬಸವರಾಜ, ಚೇತನ ಅವರನ್ನು ಬದಲಾಯಿಸಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್‌. ಪಾಟೀಲ ಅವರನ್ನು ಉದ್ಘಾಟಕರನ್ನಾಗಿ ಆಹ್ವಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT