ನುಡಿನಮನ, ಕಿಟ್ ವಿತರಣೆ

ಹುಬ್ಬಳ್ಳಿ: ಅಗಲಿದ ಸಂಘದ ಹಿರಿಯರಿಗೆ ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ವತಿಯಿಂದ ಭಾನುವಾರ ನುಡಿನಮನ ಸಲ್ಲಿಸಲಾಯಿತು.
ನಗರದ ವೀರ ಗಂಗಾಧರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ‘ಕೋವಿಡ್ ಸೋಂಕು ತಗುಲಿದಾಗ ಎದೆಗುಂದದೇ ಅಮೂಲ್ಯ ಜೀವ ಉಳಿಸಿಕೊಳ್ಳಬೇಕು. ಲಾಕ್‌ಡೌನ್‌ನಿಂದಾಗಿ ದುಡಿಯುವ ಕೈಗಳಿಗೆ ಕೆಲಸವಿಲ್ಲದ ಕಾರ್ಮಿಕರಿಗೆ ಸಂಘ, ಸಂಸ್ಥೆಗಳು ಸಹಾಯಹಸ್ತ ನೀಡಬೇಕು’ ಎಂದು ಹೇಳಿದರು. ಬಳಿಕ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಸಂಘದ ಸದಸ್ಯರಾಗಿದ್ದ ದಿವಂಗತ ಬಿ.ಎಸ್. ಪಾಟೀಲ, ಕಾಡಯ್ಯ ಹಿರೇಮಠ, ಎಸ್. ಸಿ. ಕುಂದಗೋಳಮಠ ಮತ್ತು ರವೀಂದ್ರ ವಸ್ತ್ರದ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷ ಆರ್.ಎಂ. ಹಿರೇಮಠ, ಗದಗಯ್ಯ ಹಿರೇಮಠ, ಸಂಘದ ಉಪಾಧ್ಯಕ್ಷ ವಿ.ವಿ. ಕುರ್ತಕೊಟಿ, ಸದಸ್ಯರಾದ ಮಹಾದೇವಪ್ಪ ಕುಮಶಿ, ವಿ. ಜಿ. ಪಾಟೀಲ, ಡಾ ಎಸ್. ವಿ. ಹಿರೇಮಠ, ಎಸ್. ಸಿ. ಕಮ್ಮಾರ್, ವಿ.ಎಸ್. ಸೊಪಿಮಠ ಇದ್ದರು. ಜಾನಪದ ಕಲಾವಿದ ಡಾ. ರಾಮು ಮೂಲಗಿ ಜಾನಪದ ಗೀತೆ ಹಾಡಿದರು. ಕಾರ್ಯದರ್ಶಿ ಸಿ.ಆರ್. ಉಕ್ಕಲಿ ವಂದನಾರ್ಪಣೆ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.