ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಕೊರತೆ: ಎಸ್.ಎಲ್. ಭೈರಪ್ಪ

Published : 17 ಸೆಪ್ಟೆಂಬರ್ 2024, 15:29 IST
Last Updated : 17 ಸೆಪ್ಟೆಂಬರ್ 2024, 15:29 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ‘ವಿದೇಶದ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಇರುವಷ್ಟು ಪ್ರಾಮಾಣಿಕತೆ ಭಾರತದಲ್ಲಿ ಕಾಣಸಿಗದು. ಎಷ್ಟು ಮಂದಿ ಪ್ರಾಮಾಣಿಕರು ಇದ್ದಾರೆ ಎಂಬುದು ಹುಡುಕಬೇಕಿದೆ’ ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ತಿಳಿಸಿದರು.

ಸಾಹಿತ್ಯ ಭಂಡಾರದ ಮ.ಅನಂತಮೂರ್ತಿ ಅವರ ಪುಣ್ಯತಿಥಿ ಪ್ರಯುಕ್ತ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಮತ್ತು ಸಾಹಿತ್ಯ ಪ್ರಕಾಶನ  ಮಂಗಳವಾರ ಆಯೋಜಿಸಿದ್ದ ಪ್ರಕಾಶಕರಿಗೆ ಸನ್ಮಾನ, ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನನ್ನ ಕೃತಿಗಳನ್ನು ಹಿಂದಿಗೆ ಅನುವಾದ ಮಾಡಿಸಿಕೊಟ್ಟರೂ, ಹಿಂದಿ ಪ್ರಕಾಶಕರು ಕೇವಲ ₹25 ಸಾವಿರ ನೀಡಿದರು. ನೇಪಾಳದ ವಿಶ್ವವಿದ್ಯಾಲಯದಲ್ಲೂ ಹಿಂದಿಯಲ್ಲಿ ಅನುವಾದಗೊಂಡ ನನ್ನ ಕೃತಿಗಳಿವೆ. ಇಷ್ಟೆಲ್ಲ ವ್ಯಾಪಾರವಾಗಿದ್ದರೂ, ಹೆಚ್ಚು ಹಣ ನೀಡುವುದಿಲ್ಲ’ ಎಂದರು.

‘ಬಹುತೇಕ ಪ್ರಕಾಶಕರು ಮರುಮುದ್ರಣದ ಮಾಹಿತಿ ನೀಡುವುದಿಲ್ಲ. ದುಪ್ಪಟ್ಟು ದರ ನಿಗದಿಪಡಿಸಿ, ಓದುಗರಿಗೆ ಭಯ ಹುಟ್ಟಿಸುತ್ತಾರೆ. ಕಳ್ಳ ಲೆಕ್ಕ ಕೊಡುವವರೂ ಇದ್ದಾರೆ. ಮಾರ್ವಾಡಿಗಳೇ ಹೀಗೆ. ಪ್ರಾಮಾಣಿಕ ಪ್ರಕಾಶಕರನ್ನು ಗೌರವಿಸಿದರೆ, ಇತರರಿಗೂ ಪ್ರೇರಣೆ ಆಗಬಹುದು. ಈ ವಿಷಯದಲ್ಲಿ ಕನ್ನಡದ ಪ್ರಕಾಶನ ಕ್ಷೇತ್ರ  ದೇಶಕ್ಕೆ ಮಾದರಿಯಾಗಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT