ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಭಾಷೆಯ ಪ್ರಭುತ್ವ ಎತ್ತಿಹಿಡಿಯಲಿ- ಲಿಂಗರಾಜ ಅಂಗಡಿ

ಪರಿಷತ್‌ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ
Last Updated 13 ಮಾರ್ಚ್ 2022, 15:25 IST
ಅಕ್ಷರ ಗಾತ್ರ

ಅಳ್ನಾವರ: ಗ್ರಾಮೀಣ ಭಾಗದ ಮಹಿಳೆಯರು ಕನ್ನಡದ ಪ್ರಭುತ್ವ ಎತ್ತಿ ಹಿಡಿಯುವ ಮೂಲಕ ನಮ್ಮ ಭಾಷೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಶ್ರಮಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಕ.ಸಾ.ಪ. ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕ್ರತಿ ಮತ್ತು ಜಾನಪದ ಸೊಗಡನ್ನು ಇಮ್ಮಡಿಗೊಳಿಸಲು ಮಹಿಳೆಯರು ಕ್ರಿಯಾಶೀಲರಾಗಬೇಕು. ಗಡಿ ಭಾಗದಲ್ಲಿ ಕನ್ನಡದ ಪ್ರಜ್ಞೆ ಜಾಗೃತಗೊಳಿಸಲು ಸಂಘಟಿತರಾಗಬೇಕು’ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಡಾ. ಬಸವರಾಜ ಮೂಡಬಾಗಿಲ್ ಪ್ರಮಾಣ ವಚನ ಸ್ವೀಕರಿಸಿ ‘ಕನ್ನಡದ ತೇರು ಎಳೆಯುವ ಕಾರ್ಯದ ಜೊತೆಗೆ ಸಾಧಕಿಯರನ್ನು ಸನ್ಮಾನಿಸಲಾಗಿದೆ’ ಎಂದರು. ವೈ.ವಿ. ಶಿಂಪಿ ಹಾಗೂ ಮಧುಸೂದನ ಕೆರೂರ ದಂಪತಿಯನ್ನು ಸನ್ಮಾನಿಸಲಾಯಿತು.

ಸಾಧಕಿಯರಾದ ಸುವರ್ಣಾ ತೇಗೂರ, ಸುಜಾತಾ ಸುಣಗಾರ, ಕುಂಬಾರ, ಲಕ್ಷ್ಮಿ ಸಬನೀಸ್, ಮಂಜುಳಾ ಪವಾರ, ಮಂಜುಳಾ ಕುಂಬಾರ, ಕೆ.ವಿ. ವಿಜಯ, ಸಾವಿತ್ರಿ ನಾಗನೂರ ಅವರನ್ನು ಸತ್ಕರಿಸಲಾಯಿತು. ಆಶಾ ಕಾರ್ಯಕರ್ತೆ ನಿರ್ಮಲಾ ಹಬ್ಬಣ್ಣವರ ಹಾಗೂ ಸಮಾಜ ಸೇವಕಿ ಸ್ನೇಹಶ್ರಿ ಕಿತ್ತೂರ ಅವರನ್ನು ಗೌರವಿಸಲಾಯಿತು.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮಂಗಲಾ ರವಳಪ್ಪನವರ, ಉಪಾಧ್ಯಕ್ಷ ನದೀಮ ಕಾಂಟ್ರ್ಯಕ್ಟರ್, ಅರಣ್ಯಾಧಿಕಾರಿ ಪ್ರಕಾಶ ಕಮ್ಮಾರ, ಡಾ. ಅಶೋಕ ಕುಂಟನ್ನವರ, ಪ್ರವೀಣ ಪವಾರ, ಗುರುರಾಜ ಸಬನೀಸ್, ಡಾ. ಜೀನದತ್ತ ಹಡಗಲಿ ಇದ್ದರು.

ವಿಶೇಷ ಅಹ್ವಾನಿತರಾಗಿ ಈರಯ್ಯ ಶೀಲವಂತರಮಠ, ಉದಯ ಶಿಬ್ರಿಕೇರಿ, ಏಕನಾಥ ಹೊನಗೇಕರ, ಶೈಲಾ ಈಳಿಗೇರ, ಅಜ್ಜಪ್ಪ ಕುರುಬರ, ಬಾಬಾಜಾನ ಮುಲ್ಲಾ, ವೀರಭದ್ರಯ್ಯ ಪಾಟೀಲ, ಬಾಬು ಸುಣಗಾರ, ಸಂಧ್ಯಾ ಹಟ್ಟಿಹೋಳಿ, ತುಕಾತಾಮ ಪಾಟೀಲ, ಸ್ನೇಹಶ್ರೀ ಕಿತ್ತೂರ, ಮಂಜುಳಾ ಅಂಬಡಗಟ್ಟಿ, ಸತ್ತಾರ ಬಾತಖಂಡಿ, ಶಾಹು ಶಿಂದೆ ಪಾಲ್ಗೊಂಡಿದ್ದರು.

ಪದಾಧಿಕಾರಿಗಳು

ಡಾ. ಬಸವರಾಜ ಮೂಡಬಾಗಿಲ್ (ಅಧ್ಯಕ್ಷ), ಗುರುರಾಜ ಸಬನೀಸ್ ಮತ್ತು ರಂಜನಾ ಪಾಂಚಾಳ (ಕಾರ್ಯದರ್ಶಿ), ಪ್ರವೀಣ ಪವಾರ (ಕೋಶಾಧ್ಯಕ್ಷ), ಪ್ರತಿನಿಧಿಗಳಾಗಿ ಸುರೇಂದ್ರ ಕಡಕೋಳ, ಡಿ.ಎನ್. ಲಲಿತಾ, ಮಂಜುಳಾ ಮೇದಾರ, ಜಯಶ್ರೀ ಉಡುಪಿ, ಪೂರ್ಣಿಮಾ ಮುತ್ನಾಳ, ಶೀತಲ ಬೆಟದೂರ, ಉಮೇಶ ಭೂಮಕ್ಕನವರ, ಸದಸ್ಯರಾಗಿ ಮುರಗೇಶ ಇನಾಮದಾರ, ವೈ.ವಿ. ಶಿಂಪಿ, ಸುವರ್ಣಾ ತೇಗೂರ, ಲತಾ ವಿಜಾಪೂರ, ಎಸ್.ಬಿ.ಪಾಟೀಲ, ಸೆಬಾಸ್ಟಿನ್ ಸೋಜ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT