ಅಂಬೇಡ್ಕರ್‌ ಪ್ರತಿಮೆಗೆ ಗೌರವ ನಮನ

7
ವಿವಿಧ ಸಂಘ, ಸಂಸ್ಥೆಗಳಿಂದ ಮಹಾಪರಿನಿರ್ವಾಣ ದಿನ ಆಚರಣೆ

ಅಂಬೇಡ್ಕರ್‌ ಪ್ರತಿಮೆಗೆ ಗೌರವ ನಮನ

Published:
Updated:
Deccan Herald

ಹುಬ್ಬಳ್ಳಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 62ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ನಗರದ ಅಂಬೇಡ್ಕರ್‌ ವೃತ್ತದಲ್ಲಿರುವ ಪ್ರತಿಮೆಗೆ ಗುರುವಾರ ವಿವಿಧ ಸಂಘಟನೆಗಳ ಮುಖಂಡರು ಹಾರಹಾಕಿ ಗೌರವ ಸಲ್ಲಿಸಿದರು.

ಕರ್ನಾಟಕ ಜನಪರ ಅಭಿವೃದ್ಧಿ ಹೋರಾಟ ಸಮಿತಿ, ಉತ್ತರ ಕರ್ನಾಟಕ ಸಮತಾ ಸೈನಿಕ ದಳ ಹಾಗೂ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಜ್ಞಾನಪ್ರಸಾರ ಕೇಂದ್ರ ಸಮಿತಿ, ಮಹಾನಗರ ಪಾಲಿಕೆ, ಭಾರತ ಯೂತ್‌ ಕಾಂಗ್ರೆಸ್‌, ಕರ್ನಾಟಕ ಕ್ರಾಂತಿ ಸೇನೆ, ಕರ್ನಾಟಕ ಬೀದಿ ಬದಿ ವ್ಯಾಪಾರ ಸಂಘಟನೆಗಳ ಒಕ್ಕೂಟ, ಜೈಭೀಮ ನಾಗರಿಕ ಸೇವಾ ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು.

ಮಾಜಿ ಸಚಿವ ಎಚ್‌.ಸಿ. ಮಹಾದೇವಪ್ಪ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರು ಸ್ಟೇಷನ್‌ ರಸ್ತೆಯಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕಾಂಗ್ರೆಸ್‌ ಮುಖಂಡರಾದ ಸದಾನಂದ ಡಂಗನವರ, ನಿರಂಜನ ಹಿರೇಮಠ, ಮಾರುತಿ ದೊಡ್ಡಮನಿ, ಶರೀಫ್ ಅದವಾನಿ, ಮಲ್ಲಿಕಾರ್ಜುನ ಯಾತಗೇರಿ, ಪ್ರಶಾಂತ್ ಮನಮುಟಗಿ ಇದ್ದರು.

ಕರ್ನಾಟಕ ಜನಪರ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಜಿ.ಪೆರೂರ, ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾವೀದ್‌ ಅಹಮದ್ ಎಂ. ತೋರಗಲ್ಲ, ಮಾದಿಗ ದಂಡೋರ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ ಮೇಘರಾಜ ಹಿರೇಮನಿ, ಟಿಪ್ಪು ಸುಲ್ತಾನ್ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶಮೀಮ ಮುಲ್ಲಾ, ಲೋಕೇಶ್ ಎಸ್. ಪಾಲಿಮ್ ಇದ್ದರು.

ಯೂತ್‌ ಕಾಂಗ್ರೆಸ್‌ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ ‘ಅಂಬೇಡ್ಕರ್‌ ಅವರ ಬದುಕು ಎಲ್ಲರಿಗೂ ಮಾದರಿ’ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಪಾರಸಮಲ್‌ ಜೈನ್, ಮೋಹನ ಅಸುಂಡಿ, ಪ್ರಕಾಶ ಬುರಬುರೆ, ಪಾಲಿಕೆ ಸದಸ್ಯ ಮೋಹನ ಹಿರೇಮನಿ, ಯೂತ್‌ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಇಮ್ರಾನ್‌ ಎಲಿಗಾರ, ಉಪಾಧ್ಯಕ್ಷ ಸಂತೋಷ ಎಫ್‌. ಜಕ್ಕಪ್ಪನವರ, ಕಾಂಗ್ರೆಸ್ ಪ್ರಮುಖರಾದ ಅಬ್ದುಲ್‌ ಗನಿ, ವಲಿ ಅಹ್ಮದ್‌, ಸಾಗರ ಹಿರೇಮನಿ, ನವೀದ ಮುಲ್ಲಾ, ಸತೀಶ ಮೆಹರವಾಡೆ, ಕಿರಣ, ಮೂಗಬಸವ ಇದ್ದರು.

ಸಮತಾ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ, ಪದಾಧಿಕಾರಿಗಳಾದ ಶಂಕರ್ ಅಜಮನಿ, ರಮೇಶ ಕಾಂಬಳೆ, ಚೇತನ ಕೆರೂರ, ಮಂಜುನಾಥ ಹೊಸಮನಿ, ಸಂತೋಷ ಹೊಸಮನಿ, ರವೀಂದ್ರ ಕಲ್ಯಾಣಿ ಇದ್ದರು.

ಕರ್ನಾಟಕ ಕ್ರಾಂತಿ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರಪ್ಪ ಇಟಗಿ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ ರತ್ನಾಕರ, ಹನಮಂತಪ್ಪ ನಾಯಕ, ವಿನಾಯಕ ಅಮರಗೋಳ, ಶಿವು ಮತ್ತಿಕಟ್ಟಿ, ರಮೇಶ ಕಟ್ಟಿಮನಿ, ರವಿ ಹನುಮಸಾಗರ, ಪರಶು ಸಾಲಿಮಠ ಪಾಲ್ಗೊಂಡಿದ್ದರು.

ಜೈಭೀಮ ನಾಗರಿಕ ಸೇವಾ ಸಂಘದ ಪದಾಧಿಕಾರಿಗಳಾದ ದುರಗಪ್ಪ ಚಿಕ್ಕತುಂಬಳ, ಶಿವಪ್ಪ ಪರಿಸೇರ, ಜಗನ್ನಾಥ ಗೌಡರ, ಸಿದ್ದನಗೌಡರ, ಜಿ.ಬಿ. ಕಬ್ಬೇರಜಳ್ಳಿ, ಮಾರುತಿ ಚಿಕ್ಕತುಂಬಳ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !