ಅಣ್ಣಿಗೇರಿ: ಪಟ್ಟಣದ ಜೈನ ಬಸದಿಯಲ್ಲಿ ಭಗವಾನ್ ಮಹಾವೀರರ 2,621ನೇ ಜಯಂತಿಯನ್ನು ಸಮಾಜದವರು ಸಡಗರದಿಂದ ಆಚರಿಸಿದರು.

ಬೆಳಿಗ್ಗೆಯಿಂದಲೇ ಜೈನ ಬಸದಿಯಲ್ಲಿ ಭಗವಾನ ಮಹಾವೀರರ ಭಾವಚಿತ್ರಕ್ಕೆ ಮತ್ತು 24 ತೀರ್ಥಂಕರರ ಮೂರ್ತಿಗಳಿಗೆ ಪೂಜೆ ಮಾಡಲಾಯಿತು. ಜೈನಬಸದಿ ಸುತ್ತಲೂ ಪಲ್ಲಕ್ಕಿ ಮೆರವಣಿಗೆ ಹಾಗೂ ತೊಟ್ಟಿಲು ಪೂಜೆ ನಡೆಯಿತು.

ಸಾನ್ನಿಧ್ಯ ವಹಿಸಿ ಮಾತನಾಡಿದ ಸ್ಥಳೀಯ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ‘ಭಗವಾನ ಮಹಾವೀರರು ಜೈನ ಸಮಾಜಕ್ಕೆ ಮಾತ್ರವಲ್ಲದೇ ಇತರ ಸಮಾಜಕ್ಕೂ ಮಾರ್ಗದರ್ಶನ ಮಾಡುವ ಮೂಲಕ ಪ್ರೇರಪಣೆಯಾಗಿದ್ದರು’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವಿರಾಜ ವೇರ್ಣೇಕರ ಮಾತನಾಡಿ ‘ಮಹಾವೀರರು ಇತರ ಸಮಾಜದ ಜೊತೆಗೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಆದಿಕವಿ ಪಂಪ ಜೈನ ಸಮಾಜಕ್ಕೆ ಸೇರಿದವರು. ಇಂಥ ಮಹಾತ್ಮರ ನಾಡಲ್ಲಿ ಮಹಾವೀರ ಜಯಂತಿ ಆಚರಣೆ ಖುಷಿಯ ಸಂಗತಿ’ ಎಂದರು.

ಬಿಜೆಪಿ ಮುಖಂಡ ಷಣ್ಮುಖ ಗುರಿಕಾರ ಮಾತನಾಡಿ, ಕಾಂಗ್ರೆಸ್ ಮುಖಂಡ ಎನ್.ಎಚ್.ಕೋನರಡ್ಡಿ, ಶಿವಾನಂದ ಕರಿಗಾರ, ಪದ್ಮರಾಜ ಅಂತಣ್ಣವರ, ಪುರಸಭೆ ಅಧ್ಯಕ್ಷೆ ಗಂಗಾ ಕರೆಟ್ಟನವರ, ಉಪಾಧ್ಯಕ್ಷೆ ಜಯಲಕ್ಷ್ಮೀ ಜಕರಡ್ಡಿ, ಮಲ್ಲಿಕಾರ್ಜುನ ಸುರಕೋಡ, ಅಶೋಕ ಪಂಡಿತರು, ಪ್ರವೀಣ ನಾವಳ್ಳಿ, ಭರತೇಶ ಜೈನ್, ಭಗವಂತಪ್ಪ ಪುಟ್ಟಣ್ಣವರ, ಪ್ರಕಾಶ ಅಂಗಡಿ, ನಿಂಗಪ್ಪ ಬಡ್ಡೆಪ್ಪನವರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.