ಮಂಗಳವಾರ, ಜೂನ್ 15, 2021
25 °C

ಹುಬ್ಬಳ್ಳಿ: ಫುಟ್‌ಪಾತ್‌ನಲ್ಲೇ ಪ್ರಾಣಬಿಟ್ಟ ವ್ಯಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದ ಬಳಿಯ ಪಾದಚಾರಿ ಮಾರ್ಗದಲ್ಲಿ ಗುರುವಾರ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಮುಳಗುಂದದ ಕಲಂದರಸಾಬ ಸಯ್ಯದ ಬಾಳೆ ಮೃತರು.

ಫುಟ್‌ಪಾತ್‌ನಲ್ಲಿ ಮಧ್ಯಾಹ್ನ 2ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ ಬಾಳೆ ಅವರು, ರೇಣುಕಾ ಸ್ವಿಟ್ಸ್ ಅಂಗಡಿ ಎದುರು ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಕೆಲವರು ನೆರವಿಗೆ ಬಂದು ನೀರು ಕುಡಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಬಾಳೆ ಅವರ ಬಳಿ ಸಿಕ್ಕ ಕೆಲ ದಾಖಲೆಗಳಿಂದ ಗುರುತು ಪತ್ತೆ ಹೆಚ್ಚಿ ಮನೆಯವರಿಗೆ ವಿಷಯ ತಿಳಿಸಲಾಯಿತು. ನಂತರ, ಶವವನ್ನು ಕಿಮ್ಸ್‌ಗೆ ಸಾಗಿಸಲಾಯಿತು ಎಂದು ಉಪನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಹಲ್ಲೆ– ಇಬ್ಬರ ಬಂಧನ: ನಗರದ ಬೈರಿದೇವರಕೊಪ್ಪದ ಬಳಿಯ ಪೆಟ್ರೋಲ್‌ ಬಂಕ್‌ನಲ್ಲಿ ಗುಂಪೊಂದು ಯುವಕರಿಬ್ಬರನ್ನು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಪಿಎಂಸಿ ಠಾಣೆ ಪೊಲೀಸರು ಶೋಯಬ್ ಬಿಜಾಪುರ ಮತ್ತು ಮಲಿಕ್ ಬಿಜಾಪುರನನ್ನು ಬಂಧಿಸಿದ್ದಾರೆ.

ಉಣಕಲ್ ಮೇದಾರ ಓಣಿಯ ನಾರಾಯಣ ಚವ್ಹಾಣ ಮತ್ತು ಗಣೇಶ ಬಾಗಲಕೋಟೆ ಹಲ್ಲೆಗೊಳಗಾದವರು. ಇಬ್ಬರೂ ಬೈಕ್‌ನಲ್ಲಿ ಪೆಟ್ರೋಲ್‌ ಬಂಕ್‌ಗೆ ಬಂದಿದ್ದರು. ಆಗ ಆರೋಪಿಗಳ ಬೈಕ್‌ಗೆ ಗಣೇಶ ಅವರ ಕಾಲು ತಾಕಿದೆ. ಇದೇ ವಿಷಯಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಗಳ ಶುರು ಮಾಡಿದ್ದಾರೆ. ಸ್ಥಳಕ್ಕೆ ತಮ್ಮ ಸಹಚರರನ್ನು ಕರೆಯಿಸಿಕೊಂಡು ಇಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.

ಘಟನೆಯ ದೃಶ್ಯ ಬಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಈ ಕುರಿತು ದಾಖಲಾಗಿದ್ದ ಪ್ರಕರಣದ ಮೇರೆಗೆ, ಹಲ್ಲೆ ನಡೆಸಿದವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಉಳಿದವರಿಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು