ಭಾನುವಾರ, ಏಪ್ರಿಲ್ 2, 2023
24 °C
ಸಂಯುತಾ ಪ್ರತಿಷ್ಠಾನದಿಂದ ಪುರಂದರೋತ್ಸವ ಕಾರ್ಯಕ್ರಮ

‘ಪುರಂದರದಾಸರ ಬದುಕು ದಾರಿದೀಪವಾಗಲಿ’:ಗಣಪತಿ ಗಂಗೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಪುರಂದರದಾಸರು ಸಂಗೀತ ಪಿತಾಮಹ. ಕೀರ್ತನೆಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿರುವ ಅವರ ಬದುಕು ಎಲ್ಲರಿಗೂ ದಾರಿದೀಪವಾಗಲಿ’ ಎಂದು ಸಂಯುತಾ ಪ್ರತಿಷ್ಠಾನದ ಉಪಾಧ್ಯಕ್ಷ ಗಣಪತಿ ಗಂಗೊಳ್ಳಿ ಹೇಳಿದರು.

ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲಾಮಂದಿರದಲ್ಲಿ ಸಂಯುತಾ ಪ್ರತಿಷ್ಠಾನ, ಆಚಾರ್ಯ ಸೇವಾ ಸಮಿತಿ ಹಾಗೂ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಪುರಂದರೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ರಾಹ್ಮಣ ಸಮಾಜದ ಮುಖಂಡ ಎ.ಸಿ.ಗೋಪಾಲ ಮಾತನಾಡಿ, ‘ಕನ್ನಡ ಸಾಹಿತ್ಯಕ್ಕೆ ಪುರಂದರದಾಸರ ಕೊಡುಗೆ ಅನನ್ಯ. ಕೀರ್ತನೆ, ಭಕ್ತಿ ಮಾರ್ಗದ ಮೂಲಕ ಸಮಾಜದಲ್ಲಿನ ಅಜ್ಞಾನ ಹೋಗಲಾಡಿಸಲು ಶ್ರಮಿಸಿದ್ದಾರೆ. ಹಣ, ಆಸ್ತಿಗಿಂತ ಧರ್ಮ ಮಾರ್ಗವೇ ಮೇಲು ಎನ್ನುವ ಮೂಲಕ, ಅದರಂತೆ ಬದುಕಿ ತೋರಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗಬೇಕಿದೆ’ ಎಂದು ಹೇಳಿದರು.

ಪಂಡಿತ ಪಾಂಡುರಂಗಾಚಾರ್ಯ ಹುನಗುಂದ ಮಾತನಾಡಿ, ಪುರಂದರದಾಸರು ಸರಳ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ. ಇವು ಸನ್ಮಾರ್ಗದಲ್ಲಿ ನಡೆಯಲು ದಾರಿದೀಪವಾಗಿವೆ ಎಂದರು.

ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎ.ಪಿ.ಐತಾಳ, ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮದನ್ ಕುಲಕರ್ಣಿ ಮಾತನಾಡಿದರು.

ದಿವಟೆಗಲ್ಲಿಯ ಜಿಹ್ವೇಶ್ವರ ಭಜನಾ ಮಂಡಳಿ, ದೇಶಪಾಂಡೆ ನಗರದ ಶ್ರೀಕೃಷ್ಣ ಭಜನಾ ಮಂಡಳಿ, ಉಣಕಲ್‌ನ ಪದ್ಮಜಾ ಭಜನಾ ಮಂಡಳಿ ಹಾಗೂ ಚಂದ್ರನಾಥ ನಗರದ ವೇಣುಪ್ರಿಯ ಭಜನಾ ಮಂಡಳಿ ಸದಸ್ಯರು ದಾಸ ನಮನ ಸಲ್ಲಿಸಿದರು.

ಸುಶೀಲೇಂದ್ರ ಬೆಳಗಲಿ ಕೀರ್ತನ ವ್ಯಾಖ್ಯಾನ ಮಾಡಿದರು. ಮನೋವೈದ್ಯ ಡಾ. ವಿನೋದ ಕುಲಕರ್ಣಿ ದಾಸ ಸಂಗೀತ ಪ್ರಸ್ತುತಪಡಿಸಿದರು.  ಜನಮೇಜಯ ಉಮರ್ಜಿ, ಮನೋಹರ ಪರ್ವತಿ, ಮನೋಹರ ಜೋಶಿ, ಶುಭಾ ಭಟ್, ಎಸ್.ಎಸ್.ನಾಡಿಗೇರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು