ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಲಮಿತಿಯಲ್ಲಿ ಯೋಜನಾ ಗುರಿ ಸಾಧನೆಗೆ ಸೂಚನೆ

ಜಿಲ್ಲಾಮಟ್ಟದ ಬ್ಯಾಂಕರ‍್ಸ್‌ ಪ್ರಗತಿ ಪರಿಶೀಲನಾ ಸಭೆ
Published 5 ಜೂನ್ 2024, 16:26 IST
Last Updated 5 ಜೂನ್ 2024, 16:26 IST
ಅಕ್ಷರ ಗಾತ್ರ

ಧಾರವಾಡ: 2024-25 ನೇ ಸಾಲಿಗೆ ಜಿಲ್ಲೆಯ ವಾರ್ಷಿಕ ವಿತ್ತೀಯ ಯೋಜನಾ ಗುರಿ ₹20,053 ಕೋಟಿ ನಿಗದಿಯಾಗಿದೆ. ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಪ್ರತಿ ಶಾಖೆಗೆ ಗುರಿ ನಿಗದಿಪಡಿಸಿದ್ದು ಕಾಲಮಿತಿಯಲ್ಲಿ ಪೂರ್ಣ ಪ್ರಗತಿ ಸಾಧಿಸಬೇಕು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪಾ ಟಿ.ಕೆ.ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಬ್ಯಾಂಕರ‍್ಸ್‌ ಪ್ರಗತಿ ಪರಿಶೀಲನಾ ಮತ್ತು ಬ್ಯಾಂಕರ‍್ಸ್‌ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ಪ್ರಸಕ್ತ ವಾರ್ಷಿಕ ವಿತ್ತೀಯ ಯೋಜನೆಯಲ್ಲಿ‌ ಬೆಳೆಸಾಲ ₹2003.74 ಕೋಟಿ, ಕೃಷಿ ಅವಧಿ ಸಾಲ ₹1,223.11 ಕೋಟಿ ಸೂಕ್ಷ್ಮ ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮ ಸಾಲ ₹8,096.24, ಇತರ ಆದ್ಯತಾ ವಲಯ ಸಾಲ ₹774.50 ಕೋಟಿ ಮತ್ತು ಆದ್ಯತಾ ರಹಿತ ವಲಯಕ್ಕೆ ₹7,341.77 ಕೋಟಿ ಸಾಲ ವಿತರಣೆ ಗುರಿ ಇದೆ ಎಂದು ತಿಳಿಸಿದರು.

ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಪ್ರಭುದೇವ ಎನ್.ಜಿ ಮಾತನಾಡಿ, ಕಳೆದ ಆರ್ಥಿಕ ವರ್ಷದ ಗುರಿ ₹14,580.46 ಕೋಟಿ ಇತ್ತು. ₹19,560.73 ಕೋಟಿ ಸಾಲ ವಿತರಿಸಿ ಶೇ134 ರಷ್ಟು ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಆರ್‌ಬಿಐ ಅಧಿಕಾರಿ ಅರುಣಕುಮಾರ ಪಿ. ಮಾತನಾಡಿ, ಔಪಚಾರಿಕ ಮೂಲಗಳಿಂದ ಸಾಲ ಪಡೆಯಲು ಗ್ರಾಹಕರನ್ನು ಪ್ರೋತ್ಸಾಹಿಸಬೇಕು. ಯುಪಿಐ ಮೂಲಕ ಹಣಕಾಸಿನ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಡೆಸಲು ಜಾಗೃತಿ ಮೂಡಿಸಬೇಕು. ಸೈಬರ್‌ ವಂಚನೆ, ಅಪರಾಧ ಮಾಹಿತಿ ಮತ್ತು ನಿಯಂತ್ರಣ ನಿಟ್ಟಿನಲ್ಲಿ ಸ್ಥಾಪಿಸಿರುವ ಸಹಾಯವಾಣಿ 1930 ಕುರಿತು ಜನರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ನಬಾರ್ಡ್ ಡಿಡಿಎಂ ಮಯೂರ ಕಾಂಬಳೆ, ಬ್ಯಾಂಕ್ ಆಪ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಪ್ರಶಾಂತ ಸಭೆಯಲ್ಲಿದ್ದರು.

Highlights - ಕಳೆದ ಸಾಲಿನಲ್ಲಿ ಗುರಿ ಮೀರಿದ ಸಾಧನೆ ಯುಪಿಐ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ ಸೈಬರ್‌ ವಂಚನೆ ಕುರಿತು ಜನ ಜಾಗೃತಿಗೆ ಸೂಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT