ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ| ನಾಪತ್ತೆಯಾಗಿದ್ದ ಬಾಲಕನ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆ

Last Updated 31 ಮಾರ್ಚ್ 2023, 9:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೈರಿದೇವರಕೊಪ್ಪದ ಒಂಬತ್ತು ವರ್ಷದ ಬಾಲಕ, ಶುಕ್ರವಾರ ಇಲ್ಲಿನ ದೊಡ್ಡಮನಿ ಚಾಳದ ಮಿರ್ಚಿ ಮೈದಾನದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಮೈದಾನದಲ್ಲಿನ ಕುರುಚಲು ಗಿಡಗಳ ಮಧ್ಯೆ ಅರೆನಗ್ನ ಸ್ಥಿತಿಯಲ್ಲಿ ಬಾಲಕ ನದೀಮ್'ಸಾಬ್ ಶವ ಪತ್ತೆಯಾಗಿದೆ. ದೇಹದ ಮೇಲೆ ಕೆಲವು ಗಾಯಗಳಾಗಿದ್ದು, ಮುಖದ ಮೇಲೂ ಜಜ್ಜಿದ ಬಲವಾದ ಗಾಯಗಳಿವೆ. ಬೆಂಡಿಗೇರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ಬಾಲಕ ನದೀಮ್ ಎರಡು ದಿನದ ಹಿಂದೆ ಬೆಂಡಿಗೇರಿಯಲ್ಲಿರುವ ಮಿಲ್ಲತ್ ನಗರದ ಅಜ್ಜಿಮನೆಗೆ ಬಂದಿದ್ದ. ಗುರುವಾರ ಮನೆಯಿಂದ ನಾಪತ್ತೆಯಾಗಿದ್ದ ಅವನನ್ನು ಕುಟುಂಬದವರು ಎಲ್ಲೆಡೆ ಹುಡುಕಿದ್ದಾರೆ. ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

'ಬಾಲಕನ ಸಾವಿನಲ್ಲಿ ಅನುಮಾನವಿದ್ದು, ತನಿಖೆ ಕೈಗೊಳ್ಳಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಕಿಮ್ಸ್'ಗೆ ಬಾಲಕನ ಶವ ಸಾಗಿಸಲಾಗಿದೆ.‌ ಶವಾಗಾರದ ಎದುರು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT