ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಗ್ಯಾರಂಟಿ, ಶಾಶ್ವತ ಗ್ಯಾರಂಟಿ: ಬೊಮ್ಮಾಯಿ

Published 14 ಏಪ್ರಿಲ್ 2024, 6:31 IST
Last Updated 14 ಏಪ್ರಿಲ್ 2024, 6:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಜನರ ಅಭಿಪ್ರಾಯಗಳನ್ನು ಪಡೆದು ಜವಾಬ್ದಾರಿಯಿಂದ ನಾವು ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದು, ಮತ್ತೊಮ್ಮೆ ಅದನ್ನು ಜನರ ಮುಂದಿಟ್ಟು ಚರ್ಚಿಸಲಾಗುವುದು' ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾವು ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಆ ವಿಶ್ವಾಸದ ಮೇರೆಗೆ ಜವಾಬ್ದಾರಿಯಿಂದ ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಲಹೆ ಸೂಚನೆಗಳನ್ನು ಪಡೆದು ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ. ಅದರಲ್ಲಿ ಏನೇನಿದೆ ಎಂದು ಜನರ ಮುಂದಿಟ್ಟು, ಚರ್ಚಿಸುತ್ತೇವೆ. ಕೆಲವರು ಬೇಜವಾಬ್ದಾರಿಯಿಂದ ಪ್ರಣಾಳಿಕೆ ಸಿದ್ಧಪಡಿಸಿದ್ದಾರೆ' ಎಂದು ಮೂದಲಿಸಿದರು.

'ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್ ಗ್ಯಾರಂಟಿ ಕುರಿತು ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, 'ಮೋದಿ ಗ್ಯಾರಂಟಿ ಶಾಶ್ವತ ಗ್ಯಾರಂಟಿ, ದೇಶ ಕಟ್ಟುವ ಗ್ಯಾರಂಟಿ, ಬದುಕು ಕಟ್ಟುವ ಗ್ಯಾರಂಟಿ, ಸಾಮಾಜಿಕ ನ್ಯಾಯ ನೀಡುವ ಗ್ಯಾರಂಟಿ' ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT