ಹುಬ್ಬಳ್ಳಿ: ಕಡುಬಡತನ ಕುಟುಂಬದ ಹಿನ್ನೆಲೆಯುಳ್ಳ ನಾಗವೇಣಿ ರಾಯಚೂರು ಇಲ್ಲಿ ಗೋಪನಕೊಪ್ಪದ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ 593 ಅಂಕ ಗಳಿಸಿ, ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದಿದ್ದಾರೆ.

ಅಂಗವಿಕಲರಾದ ತಂದೆ ಅಂಥೋಣಿ ಕೂಲಿಗೆಲಸ ಮಾಡುತ್ತಾರೆ. ಅವರ ತಾಯಿ ಮನೆಗಳಿಗೆ ತೆರಳಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಾರೆ. ನಾಗವೇಣಿಯವರು ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲೇ ಓದಿರುವುದು ವಿಶೇಷ.

‘ರಾಜ್ಯಕ್ಕೆ ರ್ಯಾಂಕ್ ಬಂದಿರುವುದು ಖುಷಿ ತಂದಿದೆ. ನನ್ನ ಯಶಸ್ಸಿನಲ್ಲಿ ಕಾಲೇಜು ಪ್ರಾಧ್ಯಾಪಕರದ್ದು ಪ್ರಮುಖ ಪಾತ್ರವಿದೆ. ಬಡತನದ ಮಧ್ಯೆಯೂ ತಂದೆ ಮತ್ತು ತಾಯಿಯವರು ಅಕ್ಕ ಮತ್ತು ನನ್ನನ್ನು ಚೆನ್ನಾಗಿ ಓದಿಸಿದರು. ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ಓದಿಯೇ ಸಾಧನೆ ಮಾಡಿದ್ದು, ಖುಷಿ ತಂದಿದೆ’ ಎಂದು ನಾಗವೇಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂದಿನ ಶಿಕ್ಷಣವನ್ನು ಸರ್ಕಾರಿ ಕಾಲೇಜಿನಲ್ಲೇ ಮುಂದುವರಿಸುವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧತೆ ಮಾಡಿಕೊಳ್ಳುವೆ. ಸರ್ಕಾರಿ ಅಧಿಕಾರಿ ಆಗಬೇಕು ಎಂಬ ಕನಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.