ನವಲಗುಂದ: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಶಿಸ್ತು ಹಾಗೂ ಸಂಸ್ಕೃತಿ ಕಲಿಸಿಕೊಡುವುದು ಅಗತ್ಯ ಎಂದು ಶಾಸಕ ಎನ್. ಎಚ್.ಕೋನರೆಡ್ಡಿ ಹೇಳಿದರು.

ಸ್ಥಳೀಯ ಸರ್ಕಾರಿ ಉರ್ದು ಪ್ರೌಢಶಾಲೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ 2024-25 ನೇ ಸಾಲಿನ ಎಸ್ಎಸ್ ಎಲ್ಸಿ ಪರಿಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಾಲೆಗಳ ಹೊಣೆಗಾರಿಕೆ ಬಹುಮುಖ್ಯವಾದರೂ ಪೋಷಕರು ಜವಾಬ್ದಾರಿಯೂ ಅಷ್ಟೇ ಸಮನಾಗಿದೆ. ವಿದ್ಯೆ ಮನುಷ್ಯನ ಬಾಳು ಬೆಳಸುತ್ತದೆ. ಎತ್ತರಕ್ಕೆ ಬೆಳದ ವ್ಯಕ್ತಿ ಸಮಾಜದ ಪ್ರಗತಿ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಮಾತನಾಡಿ, ’ಪೋಷಕರು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಹಾಗೂ ಹವ್ಯಾಸ ಕಲಿಸುವತ್ತ ಗಮನ ಹರಿಸಬೇಕು. ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರುವಾಗಿದ್ದು, ಉತ್ತಮ ಪರಿಸರದಲ್ಲಿ ಮಕ್ಕಳು ಬೆಳೆಯುವ ವಾತಾವರಣ ನಿರ್ಮಿಸಬೇಕು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎ.ಬಿ.ಕೊಪ್ಪದ ಮಾತನಾಡಿದರು.

ಕಳೆದ ವರ್ಷ ಎಸ್ಎಸ್ಎಲ್ಸಿಯಲ್ಲಿ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ರುಖ್ಯಾನಾ ಖ್ಯಾಜೇಬಂದನವಾಜ ಕಲಬುರಗಿಗೆ 2.5 ಗ್ರಾಂ ಬಂಗಾರದ ಚೈನ್ ಹಾಗೂ ಶಾಲೆಗೆ ದ್ವಿತೀಯ ಸ್ಥಾನ ಪಡೆದ ತೆಹರೀನ ಖಾಜಿಗೆ ₹4100 ಹಾಗೂ ತೃತೀಯ ಸ್ಥಾನ ಪಡೆದ ಸಾದಿಯಾ ಅದೋಡಿಗೆ ₹3100 ನಗದನ್ನು ಎಸ್ಡಿಎಂಸಿ ಅಧ್ಯಕ್ಷ ಖ್ಯಾಜೇಸಾಬ ಮುಲ್ಲಾಹಂಚಿನಾಳ ನೀಡಿ ಗೌರವಿಸಿದರು.

ಮುಖ್ಯೋಪಾಧ್ಯಯ ಆನಂದ ಭೋವಿ, ಶಿಕ್ಷಕ ದ್ಯಾಮನಗೌಡ ಹುಲ್ಲೂರ, ಶಿರಾಜ ಧಾರವಾಡ, ರಿಯಾಜ್ಅಹ್ಮದ ನಾಶಿಪುಡಿ, ದಾದಾಪೀರ ಬೇಪಾರಿ, ಹುಸೇನಸಾಬ ಜಮಖಾನ, ಮೋದಿನಸಾಬ ಶಿರೂರ ಮೆಹಬೂಬಸಾಬ ಶಬಾಸಖಾನ, ಅಮ್ಮದಉಲ್ಲಾ ಮಕಾನದಾರ, ಶೈನಾಜಬಿ ಜಮಾದಾರ, ರಜಿಯಾಬಾನು ದೇವರಿಡು, ಮೈನುದಿನ ಧಾರವಾಡ, ಆಕೀಲ ಮಕಾನದಾರ, ಶಿರಾಜ ಶಿರಕೋಳ, ಶರಿಫಸಾಬ ಕಲಬುರ್ಗಿ ಹಾಗೂ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.