ಮಂಗಳವಾರ, ನವೆಂಬರ್ 24, 2020
22 °C
ಹರಾಜು ಹಾಕಿ ಪ್ರತಿಭಟನೆ

ನೆರೆ ಸಂತ್ರಸ್ತರ ನಿರ್ಲಕ್ಷ್ಯ: ವಾಟಾಳ್‌ ನಾಗರಾಜ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಉತ್ತರ ಕರ್ನಾಟಕದ ನೆರೆ ಹಾವಳಿಯ ಸಂಕಷ್ಟದ ಪರಿಸ್ಥಿತಿಯನ್ನು ಕೇಂದ್ರದ ಗಮನಕ್ಕೆ ತಂದು ಪರಿಹಾರ ಕೊಡಿಸುವಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆ ಎಂದು ಆರೋಪಿಸಿದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ ರಾಜ್ಯದ ಸಂಸದರ ಭಾವಚಿತ್ರಗಳನ್ನು ಹರಾಜು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ರಾಜ್ಯದ ಎಲ್ಲ ಸಂಸದರ ಫೋಟೊಗಳನ್ನು ಹಿಡಿದು ₹1 ಹಾಗೂ ₹2ಕ್ಕೆ ಹರಾಜು ಕೂಗಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಭಾವಚಿತ್ರವನ್ನು ₹5ಕ್ಕೆ ಹರಾಜು ಮಾಡಿದರು. ಸಂಸದ ಕರಡಿ ಸಂಗಣ್ಣ ಅವರ ಭಾವಚಿತ್ರವನ್ನು ಬಾಲಕನೊಬ್ಬ ₹1ಕ್ಕೆ ಖರೀದಿಸಿದ. ನವೆಂಬರ್‌ 15ರಂದು ಬೆಳಗಾವಿಯಲ್ಲಿ ಸಂಸದರನ್ನು ಮತ್ತೊಮ್ಮೆ ಹರಾಜು ಮಾಡಲಾಗುವುದು ಎಂದು ನಾಗರಾಜ ತಿಳಿಸಿದರು.

‘ನೆರೆ ಹಾವಳಿಯ ಕಷ್ಟಕ್ಕೆ ₹50 ಸಾವಿರ ಕೋಟಿ ಪರಿಹಾರದ ಪ್ಯಾಕೇಜ್‌ ಕೊಡಿಸಲು ಸಂಸದರಿಗೆ ಸಾಧ್ಯವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆರೆಹಾವಳಿ ಪ್ರದೇಶಕ್ಕೆ ಕರೆಸಲು ವಿಫಲರಾಗಿದ್ದಾರೆ, ಇಲ್ಲಿನ ಪರಿಸ್ಥಿತಿ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯೂ ಮಾಡಲಿಲ್ಲ’ ಎಂದು ಟೀಕಿಸಿದರು.

‘ರಾಜ್ಯದ ಜನರ ಸಂಕಷ್ಟಕ್ಕೆ ಸ್ಪಂದಿಸಲು ನಮ್ಮ ಸಂಸದರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಬೇರೆ ರಾಜ್ಯಗಳ ಸಂಸದರು ತಮ್ಮ ರಾಜ್ಯದ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಂಡಿದ್ದಾರೆ. ನಮ್ಮವರಿಗೆ ನಮ್ಮವರ ಬಗ್ಗೆ ಕಾಳಜಿಯೇ ಇಲ್ಲ’ ಎಂದರು. ಕನ್ನಡಪರ ಹೋರಾಟಗಾರ ಅಮೃತ ಇಜಾರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು