ಸೋಮವಾರ, ಜನವರಿ 17, 2022
20 °C

ದಲಿತ ವಿಮೋಚನಾ ಸಮಿತಿಗೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕರ್ನಾಟಕ ದಲಿತ ವಿಮೋಚನಾ ಸಮಿತಿಯ ಧಾರವಾಡ ಜಿಲ್ಲಾ ಸಮಿತಿಯ ಆಯ್ಕೆ ತಾಲ್ಲೂಕಿನ ಹಳ್ಯಾಳದಲ್ಲಿ ಇತ್ತೀಚೆಗೆ ಜರುಗಿತು.

ಸಿದ್ಧಾರ್ಥ ಮಲ್ಲಮ್ಮನವರ (ಜಿಲ್ಲಾ ಘಟಕದ ನೂನತ ಅಧ್ಯಕ್ಷ) ಸಂಘಟನಾ ಸಂಚಾಲಕರಾಗಿ ಓಂ ನಮಃ ಶಿವಾಯ ವೀರಾಪೂರ, ರೇವಣಸಿದ್ಧಪ್ಪ ಗುತ್ತಲ, ಮೈಲಾರಿ ಹಂಚಿನಮನಿ, ಸಿದ್ದು ಮಾದರ, ಶಾಂತರಾಜು ಬಿ.ಟಿ., ವಿನಾಯಕ ಮನ್ನಾಳಕೇರಿ, ಸುರೇಶ ಹುಣಸಿಮರದ ಹಾಗೂ ಖಜಾಂಚಿಯಾಗಿ ದುರಗಪ್ಪ ವಾಲಿಕಾರ ಅವರನ್ನು ಆಯ್ಕೆ ಮಾಡಲಾಯಿತು. ಹುಬ್ಬಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಸುರೇಶ ಶಿವಣ್ಣನವರ ಹಾಗೂ ಕುಂದಗೋಳ ತಾಲ್ಲೂಕು ಅಧ್ಯಕ್ಷರಾಗಿ ಅಶೋಕ ಸಂಶಿ ಆಯ್ಕೆಯಾದರು.

ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸುರೇಶ ಖಾನಾಪುರ ಮಾತನಾಡಿ, ‘ನೂತನ ಪದಾಧಿಕಾರಿಗಳು ಅಂಬೇಡ್ಕರ್‌ ಸಿದ್ಧಾಂತ, ಸಂವಿಧಾನದಲ್ಲಿ ನಂಬಿಕೆ ಇಡಬೇಕು. ಪ್ರೊ.ಬಿ. ಕೃಷ್ಣಪ್ಪ ಅವರು ಹಾಕಿಕೊಟ್ಟ ಹೋರಾಟದ ಮಾರ್ಗದಲ್ಲಿ ಕೆಲಸ ಮಾಡಬೇಕು’ ಎಂದರು.

ಸಮಿತಿಯ ಕಾರ್ಯಾಧ್ಯಕ್ಷ ಕೆಂಚಪ್ಪ ಮಲ್ಲಮ್ಮನವರ ಮತ್ತು ಆನಂದ ಪೂಜಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.