ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸೇರುವ ತೀರ್ಮಾನ ಮಾಡಿಲ್ಲ: ಬಸವರಾಜ ಹೊರಟ್ಟಿ

Last Updated 19 ಫೆಬ್ರುವರಿ 2022, 8:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಬಿಜೆಪಿ ಸೇರುವ ಕುರಿತು ನಾನು ಈವರೆಗೂ ತೀರ್ಮಾನ ಕೈಗೊಂಡಿಲ್ಲ. ಮೇ ವರೆಗೂ ಯಾವುದೇ ನಿರ್ಧಾರವನ್ನು ಸಹ ಕೈಗೊಳ್ಳುವುದಿಲ್ಲ' ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಎರಡು ಹೆಸರು ಹೈಕಮಾಂಡ್'ಗೆ ಹೋಗಿದ್ದು, ಅದರಲ್ಲಿ ನನ್ನ ಹೆಸರು ಇದ್ದರೂ ಇರಬಹುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಅವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ಮೇಲೆ ಅವರಿಗೆ ಪ್ರೀತಿ ಜಾಸ್ತಿ, ಅದಕ್ಕೆ ಅಷ್ಟು ಕಾಳಜಿ ಮಾಡುತ್ತಾರೆ' ಎಂದರು.

'ನಾವು ಅನ್ಯಾಯ ಮಾಡುತ್ತಿದ್ದೇವೆ'
'ಸಚಿವ ಈಶ್ವರಪ್ಪ ರಾಜೀನಾಮೆ ನೀಡಲ್ಲ ಅಂತಾರೆ, ಕಾಂಗ್ರೆಸ್ ರಾಜೀನಾಮೆ ಪಡೆಯದೇ ಬಿಡಲ್ಲ ಅನ್ನುತ್ತಿದೆ. ಸದನದಲ್ಲಿ ನಡೆಯುತ್ತಿರುವ ಬಿಜೆಪಿ, ಕಾಂಗ್ರೆಸ್ ಗದ್ದಲ, ಗಂಡ-ಹೆಂಡತಿ ನಡುವೆ ಕೂಸು ಬಡವಾದ ಹಾಗಾಗಿದೆ‌. ರಾಜ್ಯದ ಜನತೆಗೆ ನಾವು ಅನ್ಯಾಯ‌ ಮಾಡುತ್ತಿದ್ದೇವೆ. ನಾನು ಸಭಾಪತಿಯಾಗಿ ಮಾತನಾಡುತ್ತಿಲ್ಲ. ಸಾಮಾನ್ಯ ಪ್ರಜೆಯಾಗಿ ಮಾತನಾಡುತ್ತಿದ್ದೇನೆ. ನಾವು ಜನರಿಗೆ ಮೋಸ, ಅವಮಾನ, ಕೆಟ್ಟದ್ದು ಮಾಡುತ್ತಿದ್ದೇವೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ನಾನು ಸಹ ವಿರೋಧ ಪಕ್ಷದವರ ಮನವೊಲಿಸಲು ಯತ್ನಿಸುತ್ತೇನೆ. ಇವರ ಗದ್ದಲದಿಂದ ಬಹಳಷ್ಟು ನೋವಾಗಿದೆ. ಅಧಿವೇಶನದಲ್ಲಿ ಹೀಗೆ ಮಾಡುತ್ತಿರುವುದರಿಂದ ಸಾರ್ವಜನಿಕರ ಕೋಟ್ಯಾಂತರ ರೂಪಾಯಿ ಹಾಳಾಗುತ್ತಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT