ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಕರಸಾಸಂ: ವರ್ಗಾವಣೆಗೆ ಅರ್ಜಿ ಆಹ್ವಾನ

Published 24 ಆಗಸ್ಟ್ 2023, 15:41 IST
Last Updated 24 ಆಗಸ್ಟ್ 2023, 15:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಾಮಾನ್ಯ ವರ್ಗಾವಣೆ ಬಯಸುವ ಸಿಬ್ಬಂದಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೇಳಿದೆ.

ಸಂಸ್ಥೆಯ ವ್ಯಾಪ್ತಿಯಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 9 ಸಾರಿಗೆ ವಿಭಾಗಗಳಿವೆ. 4,421 ಚಾಲಕರು, 2,992 ನಿರ್ವಾಹಕರು, 8,408 ಚಾಲಕ ಕಂ ನಿರ್ವಾಹಕರು, 2,844 ತಾಂತ್ರಿಕ ಸಿಬ್ಬಂದಿ ಹಾಗೂ 2,919 ಆಡಳಿತ ಸಿಬ್ಬಂದಿ ಸೇರಿದಂತೆ ಒಟ್ಟು 21,584 ನೌಕರರಿದ್ದಾರೆ.

2023ನೇ ಸಾಲಿನಲ್ಲಿ ವಿಭಾಗದೊಳಗೆ ಹಾಗೂ ಇತರೆ ವಿಭಾಗಗಳಿಗೆ ಸಾಮಾನ್ಯ ವರ್ಗಾವಣೆ ಬಯಸುವ ಅರ್ಹ ನೌಕರರಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವೆಬ್ ಸೈಟ್ ಲಿಂಕ್ transfernwkrtc.in ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 4 ಕೊನೆಯ ದಿನವಾಗಿರುತ್ತದೆ.

ವರ್ಗಾವಣೆ ಬಯಸುವ ಸಿಬ್ಬಂದಿ ಆನ್‌ಲೈನ್ ಮುಖಾಂತರವೇ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ನಂತರ ಸದರಿ ಅರ್ಜಿಯನ್ನು ಮದ್ರಿಸಿಕೊಂಡು ಸಂಬಂಧಪಟ್ಟ ಪೂರಕ ದಾಖಲಾತಿಗಳೊಂದಿಗೆ ಘಟಕ ವ್ಯವಸ್ಥಾಪಕರಿಗೆ, ಕಾರ್ಯಸ್ಥಳದ ಮುಖ್ಯಸ್ಥರಿಗೆ ಸಲ್ಲಿಸಬೇಕು. ಈಗಾಗಲೇ ನೇರವಾಗಿ ಕೇಂದ್ರ ಕಚೇರಿಗೆ ಮ್ಯಾನುವಲ್ ಅರ್ಜಿಗಳನ್ನು ಸಲ್ಲಿಸಿರುವವರು ಸಹ ಮತ್ತೊಮ್ಮೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ವರ್ಗಾಣೆಗೆ ಕನಿಷ್ಠ ಅರ್ಹತೆಗಳು: ವರ್ಗಾವಣೆ ಬಯಸುವ ಸಿಬ್ಬಂದಿ ಸಂಸ್ಥೆಯಲ್ಲಿ ಕಾಯಂ ನೌಕರರಾಗಿರಬೇಕು. ಪ್ರಸ್ತುತ ಕಾರ್ಯಸ್ಥಳದಲ್ಲಿ ಪರೀಕ್ಷಾರ್ಥ ದಿನಾಂಕದಿಂದ ಅಥವಾ ಪ್ರಸ್ತುತ ಕಾರ್ಯಸ್ಥಳದಲ್ಲಿ ವರ್ಗಾವಣೆಯಾದ ದಿನಾಂಕದಿಂದ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿರಬೇಕು. ಯಾವುದೇ ಶಿಸ್ತು ಪ್ರಕರಣಗಳಲ್ಲಿ ಇಲಾಖಾ ವಿಚಾರಣೆ ಬಾಕಿ ಇರಬಾರದು. ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ, ಭಾಗಿಯಾಗಿರುವ ನೌಕರರು ಅರ್ಹರಿರುವುದಿಲ್ಲ.

ಎಚ್.ಐ.ವಿ., ಹೃದಯ ರೋಗ, ಕ್ಯಾನ್ಸರ್, ಬೆನ್ನುಹುರಿ ತೊಂದರೆ, ಮೂತ್ರಪಿಂಡ ವೈಫಲ್ಯ ಹಾಗೂ ಮೆದುಳು ಸಂಬಂಧಿತ ಕಾಯಿಲೆಗಳು ಸೇರಿದಂತೆ ತೀವ್ರ ತರಹದ ಅನಾರೋಗ್ಯ ಪ್ರಕರಣಗಳು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ಮಕ್ಕಳಿರುವ ವಿಧವೆ, ವಿದುರ ಹಾಗೂ ಶೇ 40ಕ್ಕೂ ಮೇಲ್ಪಟ್ಟು ಅಂಗವಿಕಲತೆ ಹೊಂದಿರುವ ನೌಕರರು ಕನಿಷ್ಠ ಪರೀಕ್ಷಾರ್ಥ ಸೇವೆಯ ಮೇಲೆ ನಿಯೋಜನೆಯಾಗಿರಬೇಕು. ಇವರಿಗೆ ಪ್ರಸ್ತುತ ಕಾರ್ಯಸ್ಥಳದಲ್ಲಿ ಕನಿಷ್ಠ ಸೇವಾವಧಿಯಲ್ಲಿ ವಿನಾಯಿತಿ ಇರುತ್ತದೆ.

ಪತಿ-ಪತ್ನಿ ಪ್ರಕರಣಗಳು:
ಇಬ್ಬರೂ ಸರ್ಕಾರಿ, ನಿಗಮ, ಮಂಡಳಿ, ಸರ್ಕಾರದ ಸಾರ್ವಜನಿಕ ಉದ್ದಿಮೆಗಳ ನೌಕರರಾಗಿದ್ದಲ್ಲಿ ಮಾತ್ರ ಅನ್ವಯಿಸುತ್ತದೆ. ಇಬ್ಬರೂ ಖಾಯಂ ಸಿಬ್ಬಂದಿಯಾಗಿದ್ದು, ಇಬ್ಬರಲ್ಲಿ ಒಬ್ಬರು ಅವರ ಹುದ್ದೆಯಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿರಬೇಕು.

ಪರಸ್ಪರ ವರ್ಗಾವಣೆ ಪ್ರಕರಣಗಳು:
ಇಬ್ಬರೂ ಕಾಯಂ ಸಿಬ್ಬಂದಿಗಳಾಗಿದ್ದು, ಪ್ರಸ್ತುತ ನಿಯೋಜಿಸಿರುವ ಸ್ಥಳದಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿರಬೇಕು. ಇಬ್ಬರೂ ಒಂದೇ ಹುದ್ದೆಯವರಾಗಿರಬೇಕು. ಒಮ್ಮೆ ಪರಸ್ಪರ ವರ್ಗಾವಣೆ ಕೋರಿ ಸಲ್ಲಿಸಿದ ಅರ್ಜಿಯನ್ನು ಇಬ್ಬರಲ್ಲಿ ಯಾರೊಬ್ಬರೂ ಸಹ ರದ್ದುಪಡಿಸಲು ಕೋರುವಂತಿಲ್ಲ.

ಹೆಚ್ಚಿನ ಮಾಹಿತಿಗೆ ಆಯಾ ವಿಭಾಗದ ಆಡಳಿತಾಧಿಕಾರಿಯನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT