ಮಂಗಳವಾರ, ಮಾರ್ಚ್ 21, 2023
20 °C
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 25 ವರ್ಷ; ಬೆಟ್ಟದಷ್ಟು ನಿರೀಕ್ಷೆ

NWKRTCಗೆ ಬೇಕಿದೆ ‘ಆರ್ಥಿಕ’ ಇಂಧನ– ಸಂಸ್ಥೆಗೆ 25 ವರ್ಷವಾದರೂ ಕಾಣದ ಅಭಿವೃದ್ಧಿ

ಮಹಮ್ಮದ್ ಶರೀಫ್‌ ಕಾಡುಮಠ Updated:

ಅಕ್ಷರ ಗಾತ್ರ : | |

Prajavani

ಉತ್ತರ ಕರ್ನಾಟಕದ ಜೀವನಾಡಿ ಆಗಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಈಗ ರಜತ ಸಂಭ್ರಮ.‌ 1997ರಲ್ಲಿ ಕೆಎಸ್ಆರ್ ಟಿಸಿಯಿಂದ ಬೇರ್ಪಟ್ಟು ರಚನೆಯಾದ ವಾಯವ್ಯ ಸಾರಿಗೆ ಸಂಸ್ಥೆಯ ಕೇಂದ್ರ ಸ್ಥಾನ ಹುಬ್ಬಳ್ಳಿಯಲ್ಲಿದೆ. ಒಟ್ಟು 9 ವಿಭಾಗಗಳಲ್ಲಿ, 55ಡಿಪೊಗಳನ್ನು ಹೊಂದಿರುವ ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ 4700 ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. 44ತಾಲ್ಲೂಕಿನ 4596ಗ್ರಾಮಗಳಿಗೆ ನಿತ್ಯ ಬಸ್ ಸೌಲಭ್ಯ ಒದಗಿಸುತ್ತಿದೆ. ಸಂಸ್ಥೆ 25ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಲೇಖನ.

*

ಹುಬ್ಬಳ್ಳಿ: ಕಳೆದೆರಡು ವರ್ಷಗಳಲ್ಲಿ ಅಪ್ಪಳಿಸಿದ ಕೋವಿಡ್ ಅಲೆಯ ಹೊಡೆತದಿಂದ ಸಂಸ್ಥೆ ಚೇತರಿಸಿಕೊಂಡಿಲ್ಲ. ಆ ಅವಧಿಯಲ್ಲಿ ಜನರು ಸ್ವಂತ ವಾಹನಗಳನ್ನೇ ನೆಚ್ಚಿಕೊಂಡಿದ್ದರು, ಈಗಲೂ ಅದನ್ನೇ ಅವಲಂಬಿಸಿದ್ದಾರೆ ಎನ್ನುವುದು ಸಂಸ್ಥೆಯ ಸಿಬ್ಬಂದಿಯ ಮಾತು.

‘ಕೊರೊನಾ ಪೂರ್ವದಲ್ಲಿ ಅಂದಾಜು 20 ಲಕ್ಷ ಪ್ರಯಾಣಿಕರು ಇದ್ದರು, ಎರಡು ತಿಂಗಳ ಹಿಂದೆ 15 ಲಕ್ಷ ಜನ, ಈತ್ತೀಚೆಗೆ 17 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಮಾಹಿತಿ ನೀಡಿದರು.

‘ಆಗ ₹65ರ ಆಸುಪಾಸು ಇದ್ದ ಡೀಸೆಲ್ ದರ ಈಗ ₹87 ತಲುಪಿದೆ. 2020ರ ಫೆಬ್ರುವರಿ ನಂತರ ಟಿಕೆಟ್ ದರವೂ ಏರಿಕೆ ಆಗಿಲ್ಲ. ದಿನಕ್ಕೆ 3 ಲಕ್ಷ ಲೀಟರ್ ಡೀಸೆಲ್ ಬೇಕಾಗುತ್ತದೆ. ಆದಾಯದಲ್ಲಿ ಶೇ 57.4ರಷ್ಟು ಇಂಧನಕ್ಕೆ ಖರ್ಚಾಗುತ್ತಿದೆ. ಈ ವೆಚ್ಚ ಕಡಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.

ಸರ್ಕಾರದ ನೆರವು: ‘ಸರ್ಕಾರ ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡಿ ನೆರವು ನೀಡುತ್ತಾ ಬಂದಿದೆ. ಇತ್ತೀಚೆಗೆ ಭವಿಷ್ಯ ನಿಧಿ ಹಾಗೂ ಇಂಧನದ ಖರ್ಚು ಸರಿದೂಗಿಸಲು ₹320 ಕೋಟಿ ನೀಡಿದೆ. ಸಾಧ್ಯವಾದಷ್ಟು ಗ್ರಾಮೀಣ ಪ್ರದೇಶದ ಬಹುತೇಕ ಕಡೆ ಬಸ್ ಸಂಪರ್ಕವಿದೆ. ಕೆಲವು ಕಡೆ ಒಂದು ಹೊತ್ತಿಗೆ ಮಾತ್ರ ಬಸ್ ಸಂಚರಿಸುತ್ತಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಂಡಿದ್ದೇವೆ’ ಎಂದು ತಿಳಿಸಿದರು.

ಇತ್ತೀಚೆಗೆ ಬೆಂಗಳೂರಿನ ಬಿಎಂಟಿಸಿ ಸಂಸ್ಥೆಯಿಂದ 100 ಹಳೆಯ ಬಸ್‌ಗಳನ್ನು ಖರೀದಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು