ಗುರುವಾರ , ಫೆಬ್ರವರಿ 9, 2023
30 °C

ಹುಬ್ಬಳ್ಳಿಯಲ್ಲಿ ಪೊಲೀಸರ ಕಾರ್ಯಾಚರಣೆ: ಎರಡು ಬಟನ್‌ ಚಾಕು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಮುಂದಾಗಿರುವ ಹು–ಧಾ ಪೊಲೀಸ್‌ ಕಮಿಷನರೇಟ್‌ ಘಟಕದ ಸಿಬ್ಬಂದಿ, ನಗರದಲ್ಲಿ ರಾತ್ರಿವೇಳೆ ಅನಗತ್ಯವಾಗಿ ಸಂಚರಿಸುವವರ ಹಾಗೂ ಆಯುಧಗಳನ್ನು ಇಟ್ಟುಕೊಂಡು ಓಡಾಡುವವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.

ಮೆಹಬೂಬ್‌ ನಗರದ ಕಾರ್ತಿಕ ಈರಣ್ಣ, ಆನಂದನಗರ ರಸ್ತೆಯ ಮೌಂಟ್‌ ಫರಾನ್‌ ಶಾಲೆ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬಟನ್‌ ಚಾಕು ಇಟ್ಟುಕೊಂಡಿದ್ದರು. ಕರ್ತವ್ಯದಲ್ಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಅನುಮತಿ ಇಲ್ಲದೆ ಆಯುಧ ಇಟ್ಟುಕೊಂಡು ಓಡಾಡುತ್ತಿರುವುದು ಕಂಡುಬಂದಿದೆ. ಬೈಕ್‌, ಬಟನ್‌ ಚಾಕು ವಶಪಡಿಸಿಕೊಂಡು ಕಾರ್ತಿಕನನ್ನು ಬಂಧಿಸಿರು ಹಳೇಹುಬ್ಬಳ್ಳಿ ಠಾಣೆ ಪೊಲೀಸರು, ಅಕ್ರಮ ಶಸ್ತ್ರಾಸ್ತ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಟನ್‌ ಚಾಕು ಇಟ್ಟುಕೊಂಡು ಓಡಾಡುತ್ತಿದ್ದ ಸದಾಶಿವನಗರದ ತಾಜುದ್ದೀನ ನದಾಫ್‌ ಎಂಬಾತನನ್ನು ಹಳೇಹುಬ್ಬಳ್ಳಿ ನೇಕಾರನಗರದ ಮೇಲ್ಸೇತುವೆ ಬಳಿ ಕಸಬಾಠಾಣೆ ಪೊಲೀಸರು ಬಂಧಿಸಿ, ಚಾಕು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

ಪೋಕ್ಸೊ ಪ್ರಕರಣ ದಾಖಲು: 14 ವರ್ಷದ ಬಾಲಕಿ ಜೊತೆ ದೈಹಿಕ ಸಂಪರ್ಕ ನಡೆಸಿ, ಅವಳು ಗರ್ಭಧರಿಸಲು ಕಾರಣನಾದ 20 ವರ್ಷದ ಯುವಕನ ವಿರುದ್ಧ ಇಲ್ಲಿನ ಠಾಣೆಯೊಂದರಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

‘ಹದಿನೈದು ದಿನಗಳಿಂದ ಬಾಲಕಿ ವಾಂತಿ‌ ಮಾಡಿಕೊಳ್ಳುತ್ತಿದ್ದು, ತಾಯಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದಿದ್ದರು. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ನಾಲ್ಕು ತಿಂಗಳ ಗರ್ಭಿಣಿ ಇರುವುದಾಗಿ ತಿಳಿಸಿದ್ದಾರೆ. ಈ ಹಿಂದೆ ವಾಸವಿದ್ದ ಮನೆಗೆ ಅಣ್ಣನ ಮಗ ಆಗಾಗ ಬರುತ್ತಿದ್ದು, ಯಾರೂ ಇಲ್ಲದಾಗ ಅವನು ಮಗಳನ್ನು ಪುಸಲಾಯಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು