ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ ಸೇವಿಸಿ ಆತ್ಮಹತ್ಯೆಗೆ ಪಿಡಿಒ ಯತ್ನ; ಆಸ್ಪತ್ರೆಗೆ ದಾಖಲು

ವಿಷ ಸೇವಿಸುವುದನ್ನು ಮೊಬೈಲ್‌ ಫೋನ್‌ನಲ್ಲಿ ವಿಡಿಯೋ ಮಾಡಿದ ಪಿಡಿಒ
Published 29 ನವೆಂಬರ್ 2023, 19:13 IST
Last Updated 29 ನವೆಂಬರ್ 2023, 19:13 IST
ಅಕ್ಷರ ಗಾತ್ರ

ಧಾರವಾಡ: ತಾಲ್ಲೂಕಿನ ಯರಿಕೊಪ್ಪ ಗ್ರಾಮ ಪಂಚಾಯಿತಿಯ ಪಿಡಿಒ ನಾಗರಾಜ ಗಿಣಿವಾಲದ ಅವರು ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷ ಸೇವನೆ ಮಾಡುವುದನ್ನು ಅವರು ಮೊಬೈಲ್‌ ವಿಡಿಯೊ ರೆಕಾರ್ಡ್‌ ಮಾಡಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

‘ನಾನು ವಿಷ ಕುಡಿದು ಸಾಯುತ್ತಾ ಇದ್ದೇನೆ ಫ್ರೆಂಡ್ಸ್‌ ಐ ಆ್ಯಮ್‌ ಸಾರಿ, ಮಲ್ಲಿಕಾರ್ಜುನ ದೇವೇಂದ್ರಪ್ಪ ರೊಟ್ಟಿಗಾರು ಎಂಬವರು ಸುಮಾರುಷ್ಟು ಅಧಿಕಾರಿಗಳಿಗೆ ಬಹಳಷ್ಟು ಟಾರ್ಚರ್‌ ಕೊಟ್ಟಿದ್ಧಾರೆ. ನನಗೂ ಕೂಡ ಆ ತರಹನೇ ಟಾರ್ಚ್‌ ಕೊಟ್ಟಿದ್ಧಾರೆ. ಬೇರೆ ಬೇರೆ ತ್ರಾಸ ಕೊಡುತ್ತಿದ್ದಾರೆ. ನನ್ನ ಜೀವನ ಇಲ್ಲಿಗೆ ಎಂಡ್‌ ಮಾಡಬೇಕು ಎಂದುಕೊಂಡು ವಿಷ ಕುಡಿದುಕೊಂಡು ಸಾಯುತ್ತಿದ್ದೇನೆ, ಐ ಆ್ಯಮ್‌ ಸಾರಿ’ ಎಂದು ಪಿಡಿಒ ಹೇಳಿರುವ ವಿಡಿಯೊ ಹರಿದಾಡುತ್ತಿದೆ.

‘ಇಲಿ ಪಾಷಾಣ ಸೇವಿಸಿರುವುದಾಗಿ ಪಿಡಿಒ ನಾಗರಾಜ್‌ ಹೇಳಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗುಣವಾಗುತ್ತಿದ್ದಾರೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಸಂಗಪ್ಪ ‘ಪ್ರಜಾವಾಣಿ‘ಗೆ ತಿಳಿಸಿದರು.

‘ನಗರದ ಬೆಳಗಾವಿ ರಸ್ತೆಯಲ್ಲಿ ರಾತ್ರಿ 7 ಗಂಟೆ ಸುಮಾರಿಗೆ ಪ್ರಕರಣ ನಡೆದಿದೆ. ಅವರಿಂದ ಹೇಳಿಕೆ ಮುಂದಿನ ಕ್ರಮ ವಹಿಸಲಾಗುವುದು’ ಎಂದು ಉಪನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT