ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತನಿಖೆಯ ಬೆದರಿಕೆ ಒಡ್ಡುವ ಸಿ.ಎಂ: ಪ್ರಲ್ಹಾದ ಜೋಶಿ ಆರೋಪ

Published 23 ಆಗಸ್ಟ್ 2024, 16:09 IST
Last Updated 23 ಆಗಸ್ಟ್ 2024, 16:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಮ್ಮ ಮೇಲಿನ ಪ್ರಕರಣ ಬಿಡಿ. ಇಲ್ಲದಿದ್ದರೆ, ನಿಮ್ಮ ಮೇಲಿನ ಪ್ರಕರಣಗಳ ತನಿಖೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

‘ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಈಗ ಮಾತನಾಡುತ್ತಾರೆ. ಒಂದೂವರೆ ವರ್ಷದಿಂದ ಅವರದ್ದೇ ಸರ್ಕಾರ ಇದೆ. ಏಕೆ ತನಿಖೆ ಮಾಡಿಸಲಿಲ್ಲ? ಈಗ ತನಿಖೆ ಮಾಡಿಸಲಿ. ಅದರ ಬದಲು ಹೆದರಿಸುವ ಪ್ರಯತ್ನ ಮಾಡುವುದು ಬೇಡ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ರಾಜ್ಯಪಾಲರ ಬಳಿ ಯಾವುದೇ ಹಳೆಯ ಪ್ರಕರಣಗಳಿಲ್ಲ. ಅವರ ಪರ ಸಾಲಿಸಿಟರ್‌ ಜನರಲ್‌ ಕೋರ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಕುಮಾರಸ್ವಾಮಿ ಪ್ರಕರಣ 2006ರಲ್ಲಿ ನಡೆದಿತ್ತು.2014ರವರೆಗೆ ಕಾಂಗ್ರೆಸ್‌ ಸರ್ಕಾರ ನೇಮಿಸಿದ್ದ ರಾಜ್ಯಪಾಲರೇ ಇದ್ದರು. ಆಗ ಏಕೆ ತನಿಖೆ ಮಾಡಿಸಲಿಲ್ಲ? ಎಚ್‌ಡಿಕೆ ನಿಮ್ಮ ವಿರುದ್ಧ ಮಾತನಾಡಿದರು ಎಂದು ಅವರ ಹಿಂದೆ ಬಿದ್ದಿದ್ದೀರಿ. ಇದು ಮೂರ್ಖತನದ ನಡೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT