ರೌಡಿಗಳ ಮನೆಗಳ ಮೇಲೆ ಮುಂದುವರೆದ ಪೊಲೀಸ್ ದಾಳಿ

7

ರೌಡಿಗಳ ಮನೆಗಳ ಮೇಲೆ ಮುಂದುವರೆದ ಪೊಲೀಸ್ ದಾಳಿ

Published:
Updated:

ಹುಬ್ಬಳ್ಳಿ: ನಗರದ ಬೆಂಡಿಗೇರಿ ಹಾಗೂ ಸೆಟ್ಲ್‌ಮೆಂಟ್ ಪ್ರದೇಶದ 20 ರೌಡಿಗಳ ಮನೆಯ ಮೇಲೆ ಹುಬ್ಬಳ್ಳಿ ಧಾರವಾಡ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಹನುಮಂತ ಎಂಬಾತನ ಮನೆಯಿಂದ ಎರಡು ಮಚ್ಚುಗಳನ್ನು ಜಪ್ತಿ ಮಾಡಿದ್ದಾರೆ.

ಇತ್ತೀಚೆಗಷ್ಟೇ 42 ರೌಡಿಗಳ ಮನೆಯ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಆಯುಧಗಳನ್ನು ಜಪ್ತಿ ಮಾಡಿದ್ದರು. ‘ರೌಡಿಗಳ ಮೇಲೆ ನಿರಂತರವಾಗಿ ನಿಗಾ ಇಡಲಾಗಿದೆ ಎಂಬ ಸಂದೇಶ ನೀಡಲು ದಾಳಿ ನಡೆಸಲಾಗುತ್ತಿದೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೇಣುಕಾ ಸುಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !