ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ರೈಲ್ವೆ ಅನುದಾನ: ಶೇ 49.4ರಷ್ಟು ಬಳಕೆ: ರೈಲ್ವೆ ವಲಯ ಮಾಹಿತಿ

Published 13 ಸೆಪ್ಟೆಂಬರ್ 2023, 15:33 IST
Last Updated 13 ಸೆಪ್ಟೆಂಬರ್ 2023, 15:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ನೈರುತ್ಯ ರೈಲ್ವೆಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನೀಡಿದ್ದ ₹ 5,999 ಕೋಟಿ ಅನುದಾನದಲ್ಲಿ ಶೇ 49.4ರಷ್ಟು ಅನುದಾನವನ್ನು ಏಪ್ರಿಲ್‌– ಆಗಸ್ಟ್‌ ಅವಧಿಯಲ್ಲಿ ವಿನಿಯೋಗಿಸಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಹೇಳಿದರು.

ಹೊಸ ರೈಲು ಮಾರ್ಗ, ಜೋಡಿ ಮಾರ್ಗ, ವಿದ್ಯುದೀಕರಣ, ಸಂಚಾರ ಸೌಲಭ್ಯಗಳು, ಸಿಗ್ನಲಿಂಗ್ ಮತ್ತು ಟೆಲಿಕಾಂ ಮೂಲಸೌಕರ್ಯ, ಸೇತುವೆ ಕಾಮಗಾರಿ, ಗ್ರಾಹಕರ ಸೌಕರ್ಯಗಳು, ಸುರಕ್ಷತಾ ಮೂಲಸೌಕರ್ಯಗಳಾದ ರಸ್ತೆ ಮೇಲ್ಸೇತುವೆ, ಕೆಳ ರಸ್ತೆ ಸೇತುವೆ, ಟ್ರ್ಯಾಕ್ ನವೀಕರಣಗಳು, ಕಂಪ್ಯೂಟರೀಕರಣ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಅನುದಾನ ಬಳಸಿಕೊಳ್ಳಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT